ETV Bharat / international

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಪತ್ನಿ ಮೆಲಾನಿಯಾಗೆ ಕೋವಿಡ್​ ದೃಢ - ಟ್ರಂಪ್​ ಅವರ ಆಪ್ತ ಸಹಾಯಕಿ ಹಾಪ್​ ಹಿಕ್ಸ್​

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರ ಆಪ್ತ ಸಹಾಯಕಿ ಹಾಪ್​ ಹಿಕ್ಸ್​ಗೆ ಕೊರೊನಾ ದೃಢವಾದ ಬಳಿಕ ಇದೀಗ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್​ರ ವರದಿಯೂ ಪಾಸಿಟಿವ್​ ಬಂದಿದೆ.

US Prez Trump, first lady Melania test COVID-19 positive
ಡೊನಾಲ್ಡ್​ ಟ್ರಂಪ್​, ಪತ್ನಿ ಮೆಲಾನಿಯಾಗೆ ಕೋವಿಡ್​ ದೃಢ
author img

By

Published : Oct 2, 2020, 11:15 AM IST

Updated : Oct 2, 2020, 11:25 AM IST

ವಾಷಿಂಗ್ಟನ್​: ​ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಅವರ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಟ್ರಂಪ್​ ಅವರ ಆಪ್ತ ಸಹಾಯಕಿ ಹಾಪ್​ ಹಿಕ್ಸ್​ ಅವರ ಕೊರೊನಾ ವರದಿ ನಿನ್ನೆ ಪಾಸಿಟಿವ್​ ಬಂದಿತ್ತು. ಕಳೆದೊಂದು ವಾರದಿಂದ ಹಾಪ್​ ಹಿಕ್ಸ್ ಜೊತೆ ಟ್ರಂಪ್​ ಹೆಚ್ಚು ಸಮಯ ಕಳೆದಿದ್ದು, ವಿಷಯ ತಿಳಿಯುತ್ತಿದ್ದಂತಯೇ ಟ್ರಂಪ್​ ಹಾಗೂ ಮೆಲಾನಿಯಾ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದರು.

  • Tonight, @FLOTUS and I tested positive for COVID-19. We will begin our quarantine and recovery process immediately. We will get through this TOGETHER!

    — Donald J. Trump (@realDonaldTrump) October 2, 2020 " class="align-text-top noRightClick twitterSection" data=" ">

ಬಳಿಕ ಈ ಬಗ್ಗೆ ಟ್ವೀಟ್​ ಮಾಡಿದ್ದ ಟ್ರಂಪ್, "ಸಣ್ಣ ವಿರಾಮವನ್ನೂ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದ ಹಾಪ್​ ಹಿಕ್ಸ್​ಗೆ ಕೊರೊನಾ ಸೋಂಕು ​ದೃಢವಾಗಿದೆ. ಹೀಗಾಗಿ​​ ನಾನು ಹಾಗೂ ಪ್ರಥಮ ಮಹಿಳೆ ನಮ್ಮ ಕೋವಿಡ್​ ವರದಿಗಾಗಿ ಕಾಯುತ್ತಿದ್ದು, ಕ್ವಾರಂಟೈನ್​ ಪ್ರಕ್ರಿಯೆ ಶುರು ಮಾಡಲಿದ್ದೇವೆ" ಎಂದು ಹೇಳಿದ್ದರು.

  • Hope Hicks, who has been working so hard without even taking a small break, has just tested positive for Covid 19. Terrible! The First Lady and I are waiting for our test results. In the meantime, we will begin our quarantine process!

ಇದೀಗ ಟ್ರಂಪ್​ ಹಾಗೂ ಮೆಲಾನಿಯಾ ಇಬ್ಬರ ವರದಿಯೂ ಪಾಸಿಟಿವ್​ ಬಂದಿದೆ. "ನಾವು ನಮ್ಮ ಕ್ವಾರಂಟೈನ್​ ಪ್ರಕ್ರಿಯೆ ಪ್ರಾರಂಭಿಸಲಿದ್ದೇವೆ. ಶೀಘ್ರದಲ್ಲೇ ಇಬ್ಬರೂ ಜೊತೆಯಾಗೇ ಸೋಂಕಿನಿಂದ ಚೇತರಿಸಿಕೊಳ್ಳುತ್ತೇವೆ" ಎಂದು ಟ್ರಂಪ್​ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ.

Last Updated : Oct 2, 2020, 11:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.