ETV Bharat / international

'ನಾವೇ ಜಯಶಾಲಿಗಳಾಗುತ್ತೇವೆಂಬ ವಿಶ್ವಾಸವಿದೆ': ಮುನ್ನಡೆ ಸಾಧಿಸಿರುವ ಬೈಡನ್ ಮಾತು - ನಾವೇ ಜಯಶಾಲಿಗಳಾಗುತ್ತೇವೆಂಬ ವಿಶ್ವಾಸವಿದೆ ಎಂದ ಬೈಡನ್​

ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಬೇಕಾದ 270 ವೋಟ್​ಗಳು ನಮಗೆ ಸಿಗುತ್ತಿದೆ ಎಂಬುದು ದೀರ್ಘಾವಧಿ ಮತ ಎಣಿಕೆಯ ಬಳಿಕ ಸ್ಪಷ್ಟವಾಗಿದೆ. ನಾವೇ ಜಯಶಾಲಿಗಳಾಗುತ್ತೇವೆಂಬ ವಿಶ್ವಾಸವಿದೆ ಎಂದು ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಹೇಳಿದರು.

US Presidential election: 'We believe we'll be winners', says Biden as he leads
ಜೋ ಬೈಡನ್
author img

By

Published : Nov 5, 2020, 10:53 AM IST

ವಿಲ್ಮಿಂಗ್ಟನ್‌ (ಅಮೆರಿಕ)​: ಭಾರಿ ಕುತೂಹಲ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ ಸುತ್ತಿನ ಮತ ಎಣಿಕೆ ಪ್ರಕಾರ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಅವರು 243 ಎಲೆಕ್ಟೋರಲ್ ಮತ ಪಡೆದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಹಿಂದಿಕ್ಕಿದ್ದಾರೆ. ಟ್ರಂಪ್ 214 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ನಾವೇ ಜಯಶಾಲಿಗಳಾಗುತ್ತೇವೆಂಬ ವಿಶ್ವಾಸವಿದೆ ಎಂದ ಬೈಡನ್

ಈ ಬಗ್ಗೆ ವಿಲ್ಮಿಂಗ್ಟನ್​ಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜೋ ಬೈಡನ್, "ಪ್ರಜಾಪ್ರಭುತ್ವವೇ ಈ ದೇಶದ ಹೃದಯ ಬಡಿತ ಎಂಬುದು ಮತ್ತೆ ಸಾಬೀತಾಗಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಅಮೆರಿಕನ್ನರು ಅಮೆರಿಕದ ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ಮತ ಹಾಕಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದರು.

"ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಬೇಕಾದ 270 ವೋಟ್​ಗಳು ನಮಗೆ ಸಿಗುತ್ತಿದೆ ಎಂಬುದು ದೀರ್ಘಾವಧಿ ಮತ ಎಣಿಕೆಯ ಬಳಿಕ ಸ್ಪಷ್ಟವಾಗಿದೆ. ನಾವು ಗೆದ್ದಿದ್ದೇವೆಂದು ಘೋಷಿಸಲು ಇಲ್ಲಿ ನಿಂತಿಲ್ಲ. ಮತ ಎಣಿಕೆ ಮುಗಿದ ನಂತರ ವರದಿ ಮಾಡಲು ನಾನು ಇಲ್ಲಿ ಹಾಜರಿದ್ದೇನೆ. ನಾವೇ ಜಯಶಾಲಿಗಳಾಗುತ್ತೇವೆಂಬ ವಿಶ್ವಾಸವಿದೆ" ಎಂದು ಜೋ ಬೈಡನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.