ವಾಷಿಂಗ್ಟನ್: ಇರಾನ್ನ ಜನ ಅಲ್ಲಿನ ಆಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಇದೇ ಕಾರಣ ಇಟ್ಟುಕೊಂಡು ಇರಾನ್ ಸರ್ಕಾರ ಪ್ರತಿಭಟನಾಕಾರರನ್ನು ಕೊಲ್ಲುವ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷರ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರೇನ್, ಇರಾನ್ನಲ್ಲಿ ಹೆಚ್ಚುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಮಾತುಕತೆಗೆ ಬರುವ ಸಾಧ್ಯತೆ ಇದೆ. ಅವರು ಮಾತುಕತೆಗೆ ಬರದೇ ಇದ್ದರೂ ತಮಗೇನೂ ತೊಂದರೆ ಇಲ್ಲ. ಆದರೆ ಅವರು ಅವರ ಜನರನ್ನ ಕೊಲ್ಲುವುದು ಬೇಡ ಎಂದು ಹೇಳಿದ್ದಾರೆ.
ಇರಾನ್ ವಿರುದ್ಧ ಅಮೆರಿಕ ಹೊಸ ಆರ್ಥಿಕ ದಿಗ್ಬಂಧನ ವಿಧಿಸಲಿದೆ. ಇದರಿಂದ ಆ ರಾಷ್ಟ್ರ ಖಂಡಿತ ಸಂಕಷ್ಟ ಎದುರಿಸಲಿದೆ. ಹೀಗಾಗಿ ಅದು ಮಾತುಕತೆ ಟೇಬಲ್ಗೆ ಬರಲೇಬೇಕು ಎಂದು ಟ್ರಂಪ್ ಭದ್ರತಾ ಸಲಹೆಗಾರ ಹೇಳಿಕೊಂಡಿದ್ದಾರೆ.