ವಾಷಿಂಗ್ಟನ್ [ಅಮೆರಿಕ]:ಯುಎಸ್ ನೇವಲ್ ಆಪರೇಷನ್ ಮುಖ್ಯಸ್ಥ (ಸಿಎನ್ಒ) ಮೈಕೆಲ್ ಎಂ ಗಿಲ್ಡೆ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರಿಗಾಗಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಯುಎಸ್ ನೌಕಾಪಡೆಯ ಸದಸ್ಯರು ಜನಪ್ರಿಯ ಹಿಂದಿ ಹಾಡು ಹಾಡಿ ಗಮನ ಸೆಳೆದರು.
ಮಾ.29ರಂದು ಟ್ವಿಟರ್ ಮೂಲಕ ಸಂಧು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. "ಇದು ಸ್ನೇಹ ಬಂಧವಾಗಿದ್ದು, ಅದನ್ನು ಎಂದಿಗೂ ಮುರಿಯಲಾಗುವುದಿಲ್ಲ" ಎಂದು ಬರೆದಿದ್ದಾರೆ. ಈ ಹಾಡನ್ನು ಎ.ಆರ್ ರೆಹಮಾನ್ ಅವರು, 2004ರ ಚಲನಚಿತ್ರ ಸ್ವೇಡ್ಸ್ಗಾಗಿ ಸಂಯೋಜಿಸಿ ಹಾಡಿದ್ದರು.
-
'ये वो बंधन है जो कभी टूट नहीं सकता! This is a friendship bond that cannot be broken ever.' 🇮🇳🇺🇸
— Taranjit Singh Sandhu (@SandhuTaranjitS) March 27, 2021 " class="align-text-top noRightClick twitterSection" data="
US Navy singing a popular Hindi tune @USNavyCNO 's dinner last night! pic.twitter.com/hfzXsg0cAr
">'ये वो बंधन है जो कभी टूट नहीं सकता! This is a friendship bond that cannot be broken ever.' 🇮🇳🇺🇸
— Taranjit Singh Sandhu (@SandhuTaranjitS) March 27, 2021
US Navy singing a popular Hindi tune @USNavyCNO 's dinner last night! pic.twitter.com/hfzXsg0cAr'ये वो बंधन है जो कभी टूट नहीं सकता! This is a friendship bond that cannot be broken ever.' 🇮🇳🇺🇸
— Taranjit Singh Sandhu (@SandhuTaranjitS) March 27, 2021
US Navy singing a popular Hindi tune @USNavyCNO 's dinner last night! pic.twitter.com/hfzXsg0cAr
ಇದನ್ನು ಓದಿ: ಈ ಗ್ರಾಮದ ಪುರುಷರೆಲ್ಲ ಹೆಣ್ಣಾದರು: ಅರೆರೇ.. ಏನಿದು ವಿಚಿತ್ರ, ಯಾಕಿಂಗಾದ್ರು!?
1.5 ನಿಮಿಷಗಳ ವಿಡಿಯೊ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈ ಹಾಡು 2 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇದನ್ನು 14.9 ಸಾವಿರ ಜನರು ಇಷ್ಟಪಟ್ಟಿದ್ದಾರೆ.
ಇನ್ನು "ನೇವಿ ಬ್ಯಾಂಡ್ 1925 ರಿಂದ ನಮ್ಮ ಪಾಲುದಾರ ರಾಷ್ಟ್ರಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತಿದೆ. ಹ್ಯಾಪಿಹೋಲಿ" ಎಂದು ಯುಎಸ್ ನೇವಿ ಬ್ಯಾಂಡ್ ಟ್ವೀಟ್ ಮಾಡಿದೆ.
ಪ್ರತ್ಯೇಕ ಟ್ವೀಟ್‌ನಲ್ಲಿ ಸಂಧು ಅವರು "ಅದ್ಭುತ ಸಂಜೆ" ಆಯೋಜಿಸಿದ್ದಕ್ಕಾಗಿ ಯುಎಸ್ ಸಿಎನ್‌ಒ ಅಡ್ಮಿರಲ್ ಗಿಲ್ಡೆಗೆ ಧನ್ಯವಾದ ಅರ್ಪಿಸಿದ್ದಾರೆ.