ವಾಷಿಂಗ್ಟನ್: ಸುಮಾರು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೂರು ಅಮೆರಿಕದ ವಿಮಾನವಾಹಕಗಳು ಹಾಗೂ ನೌಕಾಪಡೆಯ ವಿಶೇಷ ನೌಕೆಗಳು ಇಂಡೋ-ಪೆಸಿಫಿಕ್ ಸಾಗರದಲ್ಲಿ ಗಸ್ತು ತಿರುಗುತ್ತಿವೆ.
ಕೊರೊನಾ ವೈರಸ್‌ನಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಹದಗೆಟ್ಟಿದೆ. ಈ ನಡುವೆ ಇಂಡೋ ಫೆಸಿಫಿಕ್ ಸಾಗರದಲ್ಲಿ ನೌಕಾಪಡೆಯ ಬೃಹತ್ ಪ್ರದರ್ಶನ ಅಚ್ಚರಿ ಉಂಟುಮಾಡಿದೆ.
ನೌಕಾಪಡೆಯ ಕ್ರೂಸರ್‌ಗಳು, ಫೈಟರ್ ಜೆಟ್‌ಗಳು ಮತ್ತು ಇತರ ವಿಮಾನಗಳ ಜೊತೆಗೆ ಮೂರು ಯುದ್ಧನೌಕೆಗಳು ಏಕಕಾಲದಲ್ಲಿ ಕಂಡುಬಂದಿವೆ.