ವಾಷಿಂಗ್ಟನ್: ಟಿಕ್ ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಆ್ಯಪ್‌ಗಳನ್ನು ನಿಷೇಧಿಸುವ ಬಗ್ಗೆ ಅಮೆರಿಕ ಗಮನಹರಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.
ಸೋಮವಾರ ನಡೆದ ಫಾಕ್ಸ್ ನ್ಯೂಸ್ ಸಂದರ್ಶನವೊಂದರಲ್ಲಿ, "ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ" ಎಂದು ಪೊಂಪಿಯೊ ಹೇಳಿದ್ದಾರೆ.
ನಿಮ್ಮ ಖಾಸಗಿ ಮಾಹಿತಿಗಳು ಸೇರಿದಂತೆ ನೀವು ಚೀನಿ ಕಮ್ಯುನಿಸ್ಟ್ ಪಕ್ಷದ ಕೈಯಲ್ಲಿ ಇರಬೇಕೆಂದು ಬಯಸಿದರೆ ಮಾತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಪೊಂಪಿಯೊ ಹೇಳಿದ್ದಾರೆ.
ಚೀನಾ ಮೂಲದ ಸ್ಟಾರ್ಟ್ಅಪ್ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್ಅನ್ನು ಯುಎಸ್ ನಾಯಕರು ಈಗಾಗಲೇ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಪದೇ ಪದೆ ಟೀಕಿಸಿದ್ದಾರೆ.