ETV Bharat / international

ಇಂಡೋ - ಪೆಸಿಫಿಕ್ ದೇಶಗಳೊಂದಿಗೆ ತನ್ನ ಸಂಬಂಧ ಬಲಪಡಿಸಿಕೊಳ್ಳುತ್ತಿರುವ ಅಮೆರಿಕ - ಹಿಂದೂ ಮಹಾಸಾಗರ ಪ್ರದೇಶ

ಯುನೈಟೆಡ್ ಸ್ಟೇಟ್ಸ್ ಆಫ್​ ಅಮೆರಿಕ ಈಗಾಗಲೇ ಇಂಡೋ - ಪೆಸಿಫಿಕ್​ನ ಪ್ರಮುಖ ಮಿತ್ರ ದೇಶಗಳೊಂದಿಗೆ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದ್ದು, ಇದೀಗ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್​ ದೇಶದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಸೂದೆಯೊಂದನ್ನು ಮಂಡಿಸಲಾಗಿದೆ.

US
ಯುಎಸ್
author img

By

Published : Jul 14, 2021, 6:48 AM IST

ವಾಷಿಂಗ್ಟನ್: ಸಂಸದರೊಬ್ಬರು ಮಂಗಳವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್​ ದೇಶದ ಸಂಬಂಧಗಳನ್ನು ಬಲಪಡಿಸುವ ಮಸೂದೆಯೊಂದನ್ನು ಮಂಡಿಸಿದ್ದಾರೆ.

ಅಮೆರಿಕದ ರಾಜಕೀಯ ಸಂಬಂಧವನ್ನು ಉತ್ತೇಜಿಸುವ ಸಲುವಾಗಿ ಮತ್ತು ಖಾಸಗಿ ವಲಯಗಳನ್ನು ಒಳಗೊಂಡಂತೆ ಹಿಂದೂ ಮಹಾಸಾಗರ ಪ್ರದೇಶದ ದೇಶಗಳೊಂದಿಗೆ ಸಂಬಂಧವನ್ನು ಬಲಪಡಿಸುವುದು ಅಮೆರಿಕದ ನೀತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್​ ಅಮೆರಿಕ ಈಗಾಗಲೇ ಇಂಡೋ-ಪೆಸಿಫಿಕ್​ನ ಪ್ರಮುಖ ಮಿತ್ರ ದೇಶಗಳೊಂದಿಗೆ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದ್ದು, ಈ ಸಂಬಂಧವನ್ನು ಮುಂದುವರೆಸುವಂತೆ ಮಸೂದೆಯಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್​ನ ಜೊವಾಕ್ವಿನ್ ಕ್ಯಾಸ್ಟ್ರೊ ಪರಿಚಯಿಸಿದ ಈ ಮಸೂದೆಯಲ್ಲಿ, ಕೆಲ ಒಪ್ಪಂದಗಳು ಮತ್ತು ಮಾತುಕತೆಯ ಮೂಲಕ ಭದ್ರತಾ ಸಹಕಾರವನ್ನು ನೀಡುವ ಸಲುವಾಗಿ ಅಮೆರಿಕ ಭಾರತದ ಜೊತೆಗೆಗಿನ ಸಂಬಂಧವನ್ನು ಮುಂದುವರೆಸಬೇಕೆಂಬ ವಿಚಾರವನ್ನು ಮಂಡಿಸಲಾಗಿದೆ. ಅಷ್ಟೇ ಅಲ್ಲ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಇಂಡೋ - ಪೆಸಿಫಿಕ್​ನಲ್ಲಿನ ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕದ ಸಹಕಾರವನ್ನು ಉತ್ತೇಜಿಸಲು ಇದು ಉಪಕಾರಿ ಎಂದು ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.