ವಾಷಿಂಗ್ಟನ್: ಟಿಬೆಟ್ನ ಅಧ್ಯಾತ್ಮಿಕ ನಾಯಕ ದಲೈಲಾಮಾ ಅವರ ಉತ್ತರಾಧಿಕಾರ ಪ್ರಕ್ರಿಯೆಯಲ್ಲಿ ಚೀನಾ ಹಸ್ತಕ್ಷೇಪ ಮಾಡಿದರೆ ಚೀನಾ ನಿರ್ಬಂಧಗಳಿಗೆ ಒಳಪಡಬೇಕಾಗುತ್ತದೆ ಎಂದು ಅಮೆರಿಕ ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯಲ್ಲಿ ಸೂಚನೆ ನೀಡಲಾಗಿದೆ.
ಟಿಬೆಟ್‌ನಲ್ಲಿ ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಗೆ ವಾಷಿಂಗ್ಟನ್‌ನ ಬೆಂಬಲವನ್ನು ಬಲಪಡಿಸುವ ಮಸೂದೆಯನ್ನು ಅಮೆರಿಕ ಸಂಸತ್ತು (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಅಂಗೀಕರಿಸಿದೆ.
2019ರ ಟಿಬೆಟ್ ನೀತಿ ಬೆಂಬಲ ಕಾಯ್ದೆಯಲ್ಲಿ, ದಲೈಲಾಮಾ ಅವರ ಉತ್ತರಾಧಿಕಾರತ್ವ ಗುರುತಿಸುವ ಪ್ರಕ್ರಿಯೆಯಲ್ಲಿ ಚೀನಾದ ಅಧಿಕಾರಿಗಳು ಮಧ್ಯಪ್ರವೇಶಿಸಿದರೆ, ಅವರು ಜಾಗತಿಕ ಮ್ಯಾಗ್ನಿಟ್ಸ್ಕಿ ಕಾಯ್ದೆ(Global Magnitsky Act)ಯಡಿ ನಿರ್ಬಂಧಗಳಿಗೆ ಒಳಗಾಗುತ್ತಾರೆ ಎಂದು ಹೇಳಿದೆ.
ಹೌಸ್ ರೂಲ್ಸ್ ಕಮಿಟಿಯ ಅಧ್ಯಕ್ಷರಾದ ಕಾಂಗ್ರೆಸ್ನ ಜೇಮ್ಸ್ ಪಿ ಮೆಕ್‌ಗವರ್ನ್ ಮತ್ತು ಚೀನಾದ ಕಾಂಗ್ರೆಸ್ಸಿನ-ಕಾರ್ಯನಿರ್ವಾಹಕ ಆಯೋಗ ಪರಿಚಯಿಸಿದ ಈ ಮಸೂದೆ 392-22ರ ಭಾರಿ ಮತದೊಂದಿಗೆ ಅಂಗೀಕರಿಸಲ್ಪಟ್ಟಿತು.