ನ್ಯೂಯಾರ್ಕ್: ಅಮೆರಿಕ ಚುನಾವಣೆ ಕೂತುಹಲ ಗಟ್ಟಕ್ಕೆ ತಲುಪಿದೆ. ಎರಡು ರಾಜ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ರತಿಸ್ಪರ್ಧಿ ಜೋ ಬೈಡನ್ ಡೊನಾಲ್ಡ್ ಟ್ರಂಪ್ಗೆ ಭಾರೀ ಹೊಡೆತ ನೀಡಿದ್ದಾರೆ.
ಯುಎಸ್ 2020 ಚುನಾವಣಾ ವಿಜೇತರಿಗೆ 270 ಎಲೆಕ್ಟ್ರೋಲ್ ವೋಟು ಅಗತ್ಯವಿದೆ. ಚುನಾವಣಾ ಮತ ಎಣಿಕೆಯಲ್ಲಿ 264 ಎಲಕ್ಟೊರಲ್ ವೋಟ್ಗಳೊಂದಿಗೆ ಜೋ ಬೈಡನ್ ಮುನ್ನುಗ್ಗುತ್ತಿದ್ದಾರೆ. ಆದ್ರೆ ಅಮೆರಿಕ ಅಧ್ಯಕ್ಷ ಟ್ರಂಪ್ 214 ವೋಟ್ಗಳನ್ನು ಪಡೆದು ಹಿನ್ನಡೆಯಲ್ಲಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ವಿಸ್ಕಾನ್ಸಿನ್ ಮತ್ತು ಮಿಚಿಗನ್ ಎರಡೂ ರಾಜ್ಯಗಳಲ್ಲಿ ಟ್ರಂಪ್ ಜಯ ಸಾಧಿಸಿದ್ದರು. ಪೆನ್ಸಿಲ್ವೇನಿಯಾದಲ್ಲಿ ಬೈಡನ್ ಜಯ ಗಳಿಸಿದ್ರೆ ಶ್ವೇತ ಭವನದ ಹಾದಿ ಸುಲಭವಾಗುವುದು. ಇದು ನಿಕಟವಾಗಿ ಹೋರಾಡಿದ ಚುನಾವಣೆಯಲ್ಲಿ ನಿರ್ಣಾಯಕ ರಾಜ್ಯವೆಂದು ಪರಿಗಣಿಸಲ್ಪಟ್ಟಿದೆ.
ಪ್ರಜಾಪ್ರಭುತ್ವವಾದಿಗಳು ಮಿಚಿಗನ್, ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾದ ಮಧ್ಯಪಶ್ಚಿಮ ರಾಜ್ಯಗಳ ಮೂಲಕ ಶ್ವೇತಭವನಕ್ಕೆ ಹೋಗುವ ಹಾದಿಯನ್ನು ಕೇಂದ್ರೀಕರಿಸಿದ್ದಾರೆ. ಅದರಂತೆ ಮಿಚಿಗನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳು ಬೈಡನ್ ಪಾಲಾಗಿವೆ. ಈಗ ಉಳಿದಿರುವುದು ಪೆನ್ಸಿಲ್ವೇನಿಯಾ ರಾಜ್ಯ ಮಾತ್ರ. ಈ ರಾಜ್ಯದಲ್ಲಿಯೂ ಬೈಡನ್ ಜಯ ಸಾಧಿಸಿದ್ರೆ ಅಮೆರಿಕಕ್ಕೆ ನೂತನ ಅಧ್ಯಕ್ಷರಾಗುವುದರಲ್ಲಿ ಅನುಮಾನವೇ ಇಲ್ಲ.