ETV Bharat / international

ತೈವಾನ್​ಗೆ ಚೀನಾ ಯುದ್ಧ ಬೆದರಿಕೆ: ವಿಚಾರ ತಳ್ಳಿ ಹಾಕಿದ ಅಮೆರಿಕ - ತೈವಾನ್​

ತೈವಾನ್ ವಿರುದ್ಧ ಚೀನಾದ ಧೋರಣೆಯನ್ನು ಯುಎಸ್​ ಖಂಡಿಸಿದೆ. ತೈವಾನ್ ಸಂಬಂಧ ಕಾಯ್ದೆ ಅಡಿ ತೈಪೆಯ ರಕ್ಷಣಾ ಸಾಮರ್ಥ್ಯ ಬೆಂಬಲಿಸುವ ವಾಷಿಂಗ್ಟನ್‌ನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

Taiwan
ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ
author img

By

Published : Jan 29, 2021, 12:00 PM IST

ವಾಷಿಂಗ್ಟನ್: ತೈವಾನ್ ವಿರುದ್ಧ ಚೀನಾದ ಯುದ್ಧ ಬೆದರಿಕೆಯನ್ನು ಪೆಂಟಗನ್‌ನ ಹಿರಿಯ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. ತೈವಾನ್ ಸಂಬಂಧ ಕಾಯ್ದೆ (ಟಿಆರ್‌ಎ) ಅಡಿ ತೈಪೆಯ ರಕ್ಷಣಾ ಸಾಮರ್ಥ್ಯವನ್ನು ಬೆಂಬಲಿಸುವ ವಾಷಿಂಗ್ಟನ್‌ನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

"ತೈವಾನ್ ಸಂಬಂಧ ಕಾಯ್ದೆಗೆ ಸಂಬಂಧಿಸಿದಂತೆ ನಮ್ಮ ಬದ್ಧತೆ ಏನೂ ಬದಲಾಗಿಲ್ಲ. ಇದು ದಶಕಗಳಿಂದ ಉಭಯಪಕ್ಷೀಯ ರೀತಿಯಲ್ಲಿ ಬೆಂಬಲಿತವಾಗಿದೆ. ರಕ್ಷಣಾ ಇಲಾಖೆಯು ಅದೇ ಬೆಂಬಲವನ್ನು ಮುಂದುವರಿಸುತ್ತದೆ. ತೈವಾನ್‌ಗೆ ಸಹಾಯ ಮಾಡುವ ಜವಾಬ್ದಾರಿ ನಮಗಿದೆ. ರಕ್ಷಣಾ ಮತ್ತು ಅದು ಮುಂದುವರಿಯುತ್ತದೆ "ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗಾರರಿಗೆ ತಿಳಿಸಿದರು.

ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ವೂ ಕಿಯಾನ್ "ತೈವಾನ್ ಪ್ರತ್ಯೇಕತೆ ಎಂದರೆ ಯುದ್ಧ" ಎಂದು ಬೆದರಿಕೆ ಹಾಕಿದ ನಂತರ, ತೈವಾನ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ಇತ್ತೀಚಿನ ಮಿಲಿಟರಿ ಕಸರತ್ತುಗಳು ಪ್ರಚೋದನೆಗಳನ್ನು ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಬೈಡೆನ್ ಆಡಳಿತದಲ್ಲಿ ತೈವಾನ್ ಜೊತೆಗಿನ ಸಂಬಂಧವನ್ನು ಬಲಪಡಿಸುವ ಯೋಜನೆಯನ್ನು ಯುನೈಟೆಡ್ ಸ್ಟೇಟ್ಸ್ ವ್ಯಕ್ತಪಡಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.