ಫಿಲಡೆಲ್ಫಿಯಾ( ಅಮೆರಿಕ): ಡೇಟಿಂಗ್ ಸೈಟ್ಗಳು, ಲೈಂಗಿಕ ಸಂಬಂಧಿತ ಉತ್ಪನ್ನಗಳ ಜಾಹೀರಾತುಗಳಲ್ಲಿ ಅನಧಿಕೃತವಾಗಿ ಆ್ಯಂಕರ್ (Newscaster) ಚಿತ್ರ ಬಳಸಿದ್ದಕ್ಕಾಗಿ ಫೇಸ್‌ಬುಕ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮರುಜೀವ ಪಡೆದಿದೆ. ಈ ಸಂಬಂಧ ಫೆಡರಲ್ ಮೇಲ್ಮನವಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ನನ್ನ ಅನುಮತಿ ಇಲ್ಲದೇ, ಜಾಹೀರಾತುಗಳಲ್ಲಿ ಭಾವಚಿತ್ರ ಬಳಸಿಕೊಂಡಿರುವುದರಿಂದ ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಫಾಕ್ಸ್ - 29 ನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕರೆನ್ ಹೆಪ್ ಹೇಳಿದ್ದಾರೆ.
ಈ ಮೊಕದ್ದಮೆ ಸಂವಹನ ಸಭ್ಯತೆ ಕಾಯಿದೆ (Communications Decency Act) ಸೆಕ್ಷನ್ 230 ರ ಅಡಿ ಬೌದ್ಧಿಕ ಆಸ್ತಿ ಹಕ್ಕುಗಳ ಅಡಿ ಬರುತ್ತದೆ ಎಂದು ಅಮೆರಿಕದ ಸರ್ಕ್ಯೂಟ್ ಕೋರ್ಟ್ನ ನ್ಯಾಯಾಧೀಶ ಥಾಮಸ್ ಹಾರಡಿಮನ್ ಹೇಳಿದರು. ಈ ಕಾಯಿದೆಯು ಅಂತರ್ಜಾಲ ಪೂರೈಕೆದಾರರನ್ನು ಮೂರನೇ ವ್ಯಕ್ತಿಯ ವಿಷಯದ ಹೊಣೆಗಾರಿಕೆಯಿಂದ ರಕ್ಷಿಸುತ್ತದೆ.
ಸದ್ಯ ಈ ಪ್ರಕರಣವು ಸ್ಯಾನ್ ಫ್ರಾನ್ಸಿಸ್ಕೋದ ಒಂಬತ್ತನೇ ಯುಎಸ್ ಸರ್ಕ್ಯೂಟ್ನಿಂದ ಅಮೆರಿಕ ಸುಪ್ರೀಂಕೋರ್ಟ್ಗೆ ವರ್ಗವಾಗುವ ಸಾಧ್ಯತೆಯಿದೆ. ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್ ಮತ್ತು ಇತರ ಕೆಲ ಸಂಘಟನೆಗಳು ಫೇಸ್‌ಬುಕ್ ಬೆಂಬಲಿಸಿ ಅಮಿಕಸ್ ಬ್ರೀಫ್ (Amicus brief- ಪ್ರಕರಣಕ್ಕೆ ಸಂಬಂಧ ಪಡೆದೆ ಇರುವವರು ನ್ಯಾಯಾಲಯಕ್ಕೆ ಸಲ್ಲಿಸುವ ಸಾಕ್ಷ್ಯಗಳು) ಸಲ್ಲಿಸಿವೆ. ಹೆಪ್ಗೆ ಬೆಂಬಲವಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಒಂದು ಸಾಕ್ಷ್ಯವನ್ನು ಸಲ್ಲಿಸಿದೆ.
ಸೆಕ್ಷನ್ 230 ಏನು ಹೇಳುತ್ತೆ
ಸಂವಹನ ಸಭ್ಯ ಕಾಯಿದೆ ಜಾರಿಗೆ ಬಂದ 25 ವರ್ಷಗಳಲ್ಲಿ ಸೆಕ್ಷನ್ 230 ರ ಬೌದ್ಧಿಕ ಆಸ್ತಿ ನಿಬಂಧನೆಯನ್ನು ಅರ್ಥೈಸುವ ಕೆಲ ಅಮೂಲ್ಯ ಪ್ರಕರಣಗಳಿವೆ ಎಂದು ಹಾರಡಿಮನ್ ಹೇಳಿದ್ದಾರೆ. 230 ಕಾಯಿದೆ ಹೇಳುವಂತೆ ಮುಕ್ತ ವಿಚಾರ ವಿನಿಮಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಎಂದು ಫೇಸ್‌ಬುಕ್ ವಾದಿಸುವುದು ಸರಿಯಾಗಿದೆ ಎಂದು ಹಾರ್ಡಿಮನ್ ಬರೆದಿದ್ದಾರೆ. ಫೇಸ್‌ಬುಕ್ ಮೇಲ್ಮನವಿ ಸಲ್ಲಿಸದಿದ್ದಲ್ಲಿ ಪ್ರಕರಣವು ಕೆಳ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆಯಿದೆ. ಫೇಸ್‌ಬುಕ್ ಪರ ವಕೀಲ ಕ್ರೇಗ್ ಪ್ರಿಮಸ್ ವಾದ ಮಂಡಿಸಿದರು.
ಜಾಹೀರಾತುಗಳಲ್ಲಿ ಬಳಸಿರುವ ಫೋಟೋ, ಕೆಲ ವರ್ಷಗಳ ಹಿಂದೆ ಆಕೆ WNYW ಚಾನಲ್ನಲ್ಲಿ ಕೆಲಸ ಮಾಡುತ್ತಿದ್ದಾಗ ನ್ಯೂಯಾರ್ಕ್ ಕನ್ವೀನಿಯನ್ಸ್ ಸ್ಟೋರ್ನ ಸೆಕ್ಯುರಿಟಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈಕೆಯ ಚಿತ್ರವನ್ನು ಹಣ ಪಾವತಿಸಿ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಬಹುದು. ಆದರೆ, ಈ ಫೋಟೋವನ್ನು ಜಾಹೀರಾತುಗಳಲ್ಲಿ ಬಳಸಿಕೊಂಡಿರುವ ಹಿನ್ನೆಲೆ, ಇದು ಆಕೆಯ ಪ್ರಚಾರದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೆಪ್ ಪರ ವಕೀಯ ಸ್ಯಾಮುವೆಲ್ ಫೈನ್ ಮ್ಯಾನ್ ಹೇಳಿದ್ದಾರೆ.
ಇದನ್ನೂ ಓದಿ: ವ್ಯಾಪಾರ, ಸಾಂಸ್ಕೃತಿಕ ಒಪ್ಪಂದಗಳ ಬಗ್ಗೆ ಜಪಾನ್ ಪ್ರಧಾನಿಯೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ
ಹೆಪ್, ಫಾಕ್ಸ್ನಲ್ಲಿ ಆ್ಯಂಕರ್ ಆಗಿರುವುದು ಮಾತ್ರವಲ್ಲದೇ, ಹೊರ ಜಗತ್ತಿನಲ್ಲಿ ಆಕೆಗೊಂದು ಘನತೆಯಿದೆ. ಆಕೆ ಚಿತ್ರ ಬಳಸಿಕೊಂಡಿರುವ ಜಾಹೀರಾತಿಗೂ ಅವಳ ವ್ಯಕ್ತಿತ್ವಕ್ಕೂ ಹೊಂದಾಣಿಕೆಯಾಗಲ್ಲ ಎಂದು ಸ್ಯಾಮುವೆಲ್ ಅಭಿಪ್ರಾಯ ಪಟ್ಟಿದ್ದಾರೆ.