ETV Bharat / international

ರಷ್ಯಾ ಜೊತೆಗಿನ ಆ ಒಪ್ಪಂದ ಕೈ ಬಿಟ್ಟರೆ... ಯಾವುದೇ ಸಹಾಯಕ್ಕೆ  ಸಿದ್ಧ ಎಂದ ದೊಡ್ಡಣ್ಣ - undefined

ಅಮೆರಿಕದ ಎಚ್ಚರಿಕೆ ನಡುವೆಯೇ ಮೋದಿ-ಪುಟಿನ್​ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಈ ಒಪ್ಪಂದವನ್ನು ಕೈಬಿಡುವಂತೆ ಭಾರತದ ಮನವೊಲಿಸಲು ಅಮೆರಿಕಾ ಮತ್ತೆ ಮುಂದಾಗಿದೆ.

ಎಸ್-400 ಖರೀದಿ ಒಪ್ಪಂದ
author img

By

Published : Jun 15, 2019, 11:17 AM IST

ವಾಷಿಂಗ್ಟನ್​: ಈಗಾಗಲೇ ಹಲವಾರು ಆತಂಕಗಳನ್ನು ಎದುರಿಸುತ್ತಿರುವ ಟ್ರಂಪ್ ಆಡಳಿತ ಭಾರತ- ರಷ್ಯಾದ ಎಸ್​​- 400 ಕ್ಷಿಪಣಿ ಒಪ್ಪಂದದಿಂದ ಬೆದರಿದೆ. ಈ ಒಪ್ಪಂದದಿಂದ ಹಿಂದೆ ಸರಿಯುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನ ಖರೀದಿಸದಂತೆ ಒತ್ತಡ ಹೇರಲು ಆರಂಭಿಸಿದೆ.

ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಅಮೆರಿಕ ನೀಡಿದ ಎಚ್ಚರಿಕೆ ನಡುವೆಯೇ ಮೋದಿ-ಪುಟಿನ್​ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದವು ಭಾರತದ ವಾಯು ಪಡೆಯ ಸಾಮರ್ಥ್ಯದ ವೃದ್ಧಿಗೆ ನೆರವಾಗುತ್ತದೆ. ಆದರೆ, ಮತ್ತೆ ಭಾರತದ ಮನವೊಲಿಕೆಗೆ ಮುಂದಾಗಿರುವ ಅಮೆರಿಕ ಭಾರತ ಎಸ್ - 400 ಕ್ಷಿಪಣಿ ವ್ಯವಸ್ಥೆ ಖರೀದಿಸುವ ನಿರ್ಧಾರವನ್ನು ಕೈಬಿಟ್ಟರೆ ವಾಷಿಂಗ್ಟನ್, ತನ್ನ ಉನ್ನತ ಶ್ರೇಣಿಯ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ಮತ್ತು ಪೇಟ್ರಿಯಾಟ್-3 ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆಗಳನ್ನು ಭಾರತಕ್ಕೆ ಮಾರಾಟ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದೆ. ಆದರೆ, ರಷ್ಯಾ ರಕ್ಷಣಾ ಕ್ಷೇತ್ರಕ್ಕೆ ಹಣದ ಹರಿವನ್ನು ತಡೆಗಟ್ಟುವುದೇ ಅಮೆರಿಕದ ಉದ್ದೇಶವಾಗಿದೆ.

ಏಷ್ಯಾ ಫೆಸಿಪಿಕ್​ನಲ್ಲಿ ಚೀನಾ ಪ್ರಾಬಲ್ಯವನ್ನ ತಡೆಗಟ್ಟಲು ಅಮೆರಿಕಕ್ಕೆ ಭಾರತದ ನೆರವು ಬೇಕು. ಏಷ್ಯಾ ಫೆಸಿಫಿಕ್​ ಮಹಾಸಾಗರದಲ್ಲಿ ಅಮೆರಿಕ - ಭಾರತ ಹಾಗೂ ಜಪಾನ್​ ಪರಸ್ಪರ ಸಹಕಾರಕ್ಕೆ ಮುಂದಾಗಿವೆ. ಈ ಮೂಲಕ ಚೀನಾವನ್ನ ಕಟ್ಟಿ ಹಾಕಲು ಮೂರೂ ರಾಷ್ಟ್ರಗಳು ಮುಂದಾಗಿವೆ. ಒಂದ್ಕಡೆ ಇಂಡಿಯಾ ಸಹಕಾರ ಬೇಕು. ಆದರೆ ರಷ್ಯಾದೊಂದಿಗೆ ಎಸ್​- 400 ಒಪ್ಪಂದ ಬೇಡ ಎಂಬುದು ಅಮೆರಿಕದ ನೀತಿ.

ಈ ನಡುವೆ, ಭಾರತದ ವಿರುದ್ಧವೂ ಸಣ್ಣದಾಗಿ ಟ್ರಂಪ್​ ವ್ಯಾಪಾರ ಯುದ್ಧ ಆರಂಭಿಸಿದ್ದು, ಅಮೆರಿಕಕ್ಕೆ ಮಾರಕವಾಗಿರುವ ಭಾರತದ ವ್ಯಾಪಾರಕ್ಕೆ ಈಗಾಗಲೇ ಟ್ರಂಪ್​ ಎಳ್ಳು ನೀರು ಬಿಟ್ಟಿದ್ದಾರೆ. ಇಷ್ಟೆಲ್ಲ ಗೊಂದಲಗಳ ಮಧ್ಯೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಹಾಗೂ ಪ್ರಾಬಲ್ಯ ಹೆಚ್ಚಾಗುತ್ತಿದ್ದು, ಚೀನಾ ನಾಗಾಲೋಟಕ್ಕೆ ತಡೆಯೊಡ್ಡಲು ಮೋದಿ ನೆರವು ಈಗ ಬೇಕೇ ಬೇಕು. ಈ ಸಂದಿಗ್ದಲ್ಲಿರುವ ಅಮೆರಿಕ ರಷ್ಯಾ ಜತೆಗಿನ ಒಪ್ಪಂದ ಮುರಿದುಕೊಳ್ಳಲು ಆಮಿಷವೊಡ್ಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲೇ ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಒಸಾಕಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆ​ಯಲ್ಲಿ ಭೇಟಿ ಮಾಡುವ ಮೊದಲೇ ಯುಎಸ್​ನ ಸಂಸದರು ಹಾಗೂ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಭಾರತಕ್ಕೆ ಭೇಟಿ ನೀಡಿ ಒಪ್ಪಂದ ಹಿಂಪಡೆಯುವ ಕುರಿತು ಚರ್ಚಿಸಲಿದ್ದಾರೆ.

ಅಮೆರಿಕದ ಈ ತೀರ್ಮಾನ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಮೆರಿಕದ ಈ ಲಾಬಿಗೆ ಪ್ರಧಾನಿ ಮೋದಿ ಬಗ್ಗುವರೇ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.