ವಾಷಿಂಗ್ಟನ್ (ಅಮೆರಿಕ): ಅಮೆರಿಕಾದ 117 ನೇ ಸಂಸತ್ (ಕಾಂಗ್ರೆಸ್) ನ ಅಧಿವೇಶನದ ಮೊದಲ ದಿನದಂದು ರಿಪಬ್ಲಿಕನ್ ಸಂಸದರು, ಪಾಕಿಸ್ತಾನಕ್ಕೆ ನೀಡಲಾದ ನ್ಯಾಟೋ ಮಿತ್ರ ರಾಷ್ಟ್ರ ಎಂಬ ಸ್ಥಾನಮಾನವನ್ನು ತೆಗೆದುಹಾಕಬೇಂಬ ಪ್ರಸ್ತಾವನೆಯ ಮಸೂದೆ ಮಂಡಿಸಿದ್ದಾರೆ.
ಸಂಸದ ಆ್ಯಂಡಿ ಬಿಗ್ಸ್ ಈ ಮಸೂದೆ ಮಂಡಿಸಿದ್ದು, ಪಾಕಿಸ್ತಾನ ಸದ್ಯ ಅಮೆರಿಕದ ಮಿತ್ರ ರಾಷ್ಟ್ರವಾಗಿದೆ. ಇದರಿಂದ ರಕ್ಷಣಾ ಸಾಮಗ್ರಿಗಳ ಪೂರೈಕೆ ಜತೆ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ಸಿಗುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಗುರುತಿಸಿಕೊಳ್ಳುತ್ತಿದೆ. ಹಾಗಾಗಿ ನ್ಯಾಟೋ ಒಪ್ಪಂದ ರದ್ದುಗೊಳಿಸುವ ಮಸೂದೆ ಮಂಡಿಸಿದರು.
‘ನಾನು ಅರಿಝೋನಾ ಪ್ರಾಂತ್ಯ ಪ್ರತಿನಿಧಿಸುತ್ತಿದ್ದು, ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಪ್ರಾಂತ್ಯದ ಜನತೆಗೆ ಭರವಸೆ ನೀಡಿದ್ದಂತೆ ಇಂದು 28 ಬಿಲ್ಗಳನ್ನು ಮಂಡಿಸುತ್ತಿದ್ದು, ನನ್ನ ಭರವಸೆಗಳನ್ನು ಉಳಿಸಿಕೊಂಡಿದ್ದೇನೆ’ ಎಂದು ಬಿಗ್ಸ್ ಟ್ವೀಟ್ ಮಾಡಿದ್ದಾರೆ.