ETV Bharat / international

'ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಒಕ್ಕೂಟ' ಪ್ರಾರಂಭ ಘೋಷಣೆ ಮಾಡಿದ ದೊಡ್ಡಣ್ಣ

ಪ್ರಪಂಚದಾದ್ಯಂತ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಿಸುವ ಅಂತಾ​ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಒಕ್ಕೂಟ ಪ್ರಾರಂಭಿಸುವುದಾಗಿ ಅಮೆರಿಕ ಘೋಷಿಸಿದೆ.

pompe
pompe
author img

By

Published : Feb 6, 2020, 1:59 PM IST

ವಾಷಿಂಗ್ಟನ್: 27 ರಾಷ್ಟ್ರಗಳ ಅಂತಾ​ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಒಕ್ಕೂಟ ಪ್ರಾರಂಭಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಘೋಷಿಸಿದೆ. ಇದು ಪ್ರಪಂಚದಾದ್ಯಂತ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ.

"ಇದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹಾಗೂ ಅದನ್ನು ರಕ್ಷಿಸುವ ಸಮಾನ ಮನಸ್ಕರ ಒಕ್ಕೂಟವಾಗಿರಲಿದೆ" ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಒಕ್ಕೂಟದ ಬಗ್ಗೆ ಮಾಹಿತಿ ನೀಡಿದರು.

ಈ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಪ್ರಮುಖ ದೇಶಗಳಲ್ಲಿ ಆಸ್ಟ್ರೇಲಿಯ, ಬ್ರೆಜಿಲ್, ಯುನೈಟೆಡ್ ಕಿಂಗ್​​ಡಮ್​​, ಇಸ್ರೇಲ್, ಉಕ್ರೇನ್, ನೆದರ್‌ಲ್ಯಾಂಡ್ ಮತ್ತು ಗ್ರೀಸ್ ದೇಶಗಳು ಇವೆ.

"ಜನರು ತಮ್ಮ ಆತ್ಮ ಸಾಕ್ಷಿಗನುಗುಣವಾಗಿ ಜೀವನ ನಡೆಸುವ ಹಕ್ಕನ್ನು ರಕ್ಷಿಸುವುದು ಇದರ ಪ್ರಮುಖ ಆದ್ಯತೆಯಾಗಿದೆ" ಎಂದು ಪೊಂಪೆ ತಿಳಿಸಿದರು.

"ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಭಯೋತ್ಪಾದಕರು ಮತ್ತು ಹಿಂಸಾತ್ಮಕ ಉಗ್ರಗಾಮಿಗಳನ್ನು ನಾವು ಖಂಡಿಸುತ್ತೇವೆ" ಎಂದು ಅವರು ಇದೇ ವೇಳೆ, ಹೇಳಿದರು.

ಇದೊಂದು ಒಮ್ಮತದ ಒಕ್ಕೂಟವಾಗಿದ್ದು, ರಾಷ್ಟ್ರಗಳು ಸ್ವ - ಇಚ್ಛೆಯಿಂದ ಸೇರಬಹುದಾಗಿದೆ ಎಂದು ಆಹ್ವಾನ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.