ETV Bharat / international

ಆಫ್ಘನ್‌ನಲ್ಲಿ 20 ವರ್ಷಗಳಿಂದ ಸಾಧಿಸಿದ್ದ ಪ್ರಗತಿ ತಾಲಿಬಾನ್‌ಗಳಿಂದ ನಾಶ ಸಾಧ್ಯತೆ - UNDP ಕಳವಳ

ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಸಾಧಿಸಿದ್ದ ಪ್ರಗತಿಯನ್ನು ತಾಲಿಬಾನ್‌ಗಳು ನಾಶ ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ-ಯುಎನ್‌ಡಿಪಿ ಆತಂಕ ವ್ಯಕ್ತಪಡಿಸಿದೆ. ಇದೀಗ ಅಲ್ಲಿನ ಮಹಿಳೆಯರು ಮತ್ತು ಯುವತಿಯರ ಹಕ್ಕುಗಳನ್ನು ದುರ್ಬಲಗೊಳಿಸಿ ಅದರ ಲಾಭಗಳನ್ನು ಪಡೆಯುವುದು ಅಪಾಯವನ್ನು ಉಂಟುಮಾಡುತ್ತದೆ ಅಂತಲೂ ವಿಶ್ವಸಂಸ್ಥೆ ಎಚ್ಚರಿಸಿದೆ.

UNDP alarmed over 'current trajectory' of Afghan conflict
ಅಫ್ಘಾನ್‌ನಲ್ಲಿ 20 ವರ್ಷಗಳಿಂದ ಸಾಧಿಸಿದ್ದ ಪ್ರಗತಿ ತಾಲಿಬಾನ್‌ಗಳಿಂದ ನಾಶ ಸಾಧ್ಯತೆ - ಯುಎನ್‌ಡಿಪಿ ಕಳವಳ
author img

By

Published : Aug 21, 2021, 8:15 AM IST

ವಾಷಿಂಗ್ಟನ್‌: ತ್ವರಿತ ದಾಳಿ ಮೂಲಕ ಆಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಅಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ-(UNDP) ಆತಂಕ ವ್ಯಕ್ತಪಡಿಸಿದೆ. ತಾಲಿಬಾನ್‌ಗಳು ಜನರನ್ನು ಆಫ್ಘನ್‌ನಿಂದ ಪಲಾಯನ ಆಗುವಂತೆ ಮಾಡಿರುವುದರಿಂದ ಬಿಕ್ಕಟ್ಟಿಗೆ ಕಾರಣವಾಗಿದೆ. ರಾಜ್ಯ ಸಂಸ್ಥೆಗಳ ವೇಗವರ್ಧಿತವಾದ ಮಾನವೀಯ ಮತ್ತು ಅಭಿವೃದ್ಧಿ ತುರ್ತುಸ್ಥಿತಿಯನ್ನು ಕಳೆದ 20 ವರ್ಷಗಳಲ್ಲಿ ಕಷ್ಟಪಟ್ಟು ಸಾಧಿಸಿದ ಅಭಿವೃದ್ಧಿ ಪ್ರಗತಿಯನ್ನು ಅಳಿಸಬಹುದು ಎಂದು ಯುಎನ್‌ಡಿಪಿ ಎಚ್ಚರಿಸಿದೆ.

ಲಕ್ಷಾಂತರ ಮಂದಿ ಆಫ್ಘನ್‌ ಜನರು ಹಾಗೂ ಜಗತ್ತಿನ ಇತರರ ಶಾಂತಿ ಹಾಗೂ ಮಾನವ ಹಕ್ಕುಗಳಿಗೆ ಗೌರವ ನೀಡಲು ಯುಎನ್‌ಡಿಪಿ ಕೆಲಸ ಮಾಡುತ್ತಿದೆ. ಲಿಂಗ, ಧರ್ಮ, ಜನಾಂಗೀಯ ಹಿನ್ನೆಲೆ, ವೃತ್ತಿಪರ ಸಂಬಂಧ ಅಥವಾ ರಾಜಕೀಯ ನಂಬಿಕೆಗಳ ಹೊರತಾಗಿಯೂ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ ಎಂದು ಯುಎನ್‌ಡಿಪಿ ಹೇಳಿಕೆಯಲ್ಲಿ ತಿಳಿಸಿದೆ.

ಘರ್ಷಣೆ, ಅನಿಶ್ಚಿತತೆ, ಬರ ಮತ್ತು ಸಾಂಕ್ರಾಮಿಕ ಕೋವಿಡ್ -19 ಪ್ರಸ್ತುತ ಆಫ್ಘನ್‌ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಇದೀಗ ಅಲ್ಲಿನ ಮಹಿಳೆಯರು ಮತ್ತು ಯುವತಿಯರ ಹಕ್ಕುಗಳನ್ನು ದುರ್ಬಲಗೊಳಿಸಿ ಅದರ ಲಾಭಗಳನ್ನು ಪಡೆಯುವುದು ಅಪಾಯವನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಿರುವುದಾಗಿ ಯುಎನ್‌ಡಿಪಿ ಆಡಳಿತಾಧಿಕಾರಿ ಅಚಿಮ್ ಸ್ಟೈನರ್ ಹೇಳಿದ್ದಾರೆ.

ಇದನ್ನೂ ಓದಿ: 5,000 Afghan ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಲಿದೆ UAE

ಕಳೆದ 20 ವರ್ಷಗಳಲ್ಲಿ, ಅಫ್ಘಾನಿಸ್ತಾನದಲ್ಲಿ ಜನನದ ಜೀವಿತಾವಧಿ ಒಂಬತ್ತು ವರ್ಷ ವಿಸ್ತರಿಸಿದೆ. ಯುಎನ್‌ಡಿಪಿಯ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಆಫ್ಘನ್‌ನಲ್ಲಿ ಶಾಲಾ ವರ್ಷಗಳು ಆರರಿಂದ 10ಕ್ಕೆ ಏರಿಕೆಯಾಗಿತ್ತು. ಜೊತೆಗೆ ಒಟ್ಟು ರಾಷ್ಟ್ರೀಯ ಆದಾಯ ಎರಡು ಪಟ್ಟು ಹೆಚ್ಚಾಗಿದೆ. ಆದರೆ ಈ ಜನರಿಗೆ ಎಂದಿಗಿಂತಲೂ ಹೆಚ್ಚು ಅಭಿವೃದ್ಧಿ ಮತ್ತು ಮಾನವೀಯ ಬೆಂಬಲದ ಅಗತ್ಯವಿದೆ. ಆರಂಭಿಕ ಚೇತರಿಕೆ, ಕೋವಿಡ್ ಪರಿಸ್ಥಿತಿ ಹಾಗೂ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರ ಮತ್ತು ದುರ್ಬಲತೆಗಳನ್ನು ತಡೆಗಟ್ಟಲು ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಉಳಿಯುವುದು ಮತ್ತು ತಲುಪಿಸುವುದು ನಮ್ಮ ನೈತಿಕ ಅವಶ್ಯಕತೆಯಾಗಿದೆ ಎಂದು ಸ್ಟೈನರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.