ವಿಶ್ವಸಂಸ್ಥೆ : ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮವನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿ ಭಾರತ ಮತ್ತು ಪಾಕಿಸ್ತಾನ ನೀಡಿರುವ ಜಂಟಿ ಹೇಳಿಕೆಯನ್ನು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷ ವೋಲ್ಕಾನ್ ಬೊಜ್ಕಿರ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಗುಟೆರೆಸ್‌ನ ವಕ್ತಾರ ಸ್ಟೀಫನ್ ಗುಟೆರೆಸ್ "ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಕಾಪಾಡುವ ಒಪ್ಪಂದದ ಕುರಿತು ಭಾರತ ಮತ್ತು ಪಾಕಿಸ್ತಾನ ಹೊರಡಿಸಿದ ಜಂಟಿ ಹೇಳಿಕೆಯನ್ನು ಪ್ರಧಾನ ಕಾರ್ಯದರ್ಶಿ ಶ್ಲಾಘಿಸಿದ್ದಾರೆ. ಈ ಸಕಾರಾತ್ಮಕ ಹೆಜ್ಜೆ ಮುಂದಿನ ಮಾತುಕತೆಗೆ ಅವಕಾಶ ನೀಡುತ್ತದೆ ಎಂದಿದ್ದಾರೆ.
ಓದಿ: ಉಗ್ರರ ತಾಣ ಪಾಕ್ ಬೂದು ಪಟ್ಟಿಯಲ್ಲಿಯೇ ಉಳಿಯಲಿದೆ : ಎಫ್ಎಟಿಎಫ್
ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ನಡೆಸಲು ಗುಟೆರಸ್ ಉದ್ದೇಶಿಸಿದ್ದಾರೆಯೇ ಎಂದು ಕೇಳಿದಾಗ, ನನಗೆ ತಿಳಿದಿರುವ ಹಾಗೆ ಅಂತಹ ಯಾವುದೇ ಯೋಜನೆಯಿಲ್ಲ. ಆದರೆ, ಯಾವುದೇ ಸದಸ್ಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ದಿಸಲು ಪ್ರಧಾನ ಕಾರ್ಯದರ್ಶಿ ಸದಾ ಸಿದ್ದರಿದ್ದಾರೆ ಎಂದು ಹೇಳಿದರು.