ETV Bharat / international

ಉಕ್ರೇನ್​ ಬಿಕ್ಕಟ್ಟು: ಭದ್ರತಾ ಮಂಡಳಿಯ ತುರ್ತು ಸಭೆ ಕರೆದ ವಿಶ್ವಸಂಸ್ಥೆ

ಉಕ್ರೇನ್​ ಬಿಕ್ಕಟ್ಟು ಉಲ್ಬಣಗೊಂಡ ಪರಿಣಾಮ ವಿಶ್ವಸಂಸ್ಥೆಯು ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ.

UN Security Council
ವಿಶ್ವಸಂಸ್ಥೆ
author img

By

Published : Feb 22, 2022, 6:49 AM IST

ಉಕ್ರೇನ್​ ಬಿಕ್ಕಟ್ಟು ಉಲ್ಬಣಗೊಂಡಿದ್ದು ವಿಶ್ವಸಂಸ್ಥೆಯು ಇಂದು (ಅಮೆರಿಕ ಕಾಲಮಾನ- ಸೋಮವಾರ ರಾತ್ರಿ 9ಕ್ಕೆ) ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ.

ಉಕ್ರೇನ್​ ಬಂಡುಕೋರರ ಹಿಡಿತದಲ್ಲಿರುವ ಡೊನೆಟ್ಕ್​ ಮತ್ತು ಲುಸಾಂಕ್​ ಪ್ರದೇಶದಲ್ಲಿ ಪ್ರತ್ಯೇಕ ಸರ್ಕಾರ ರಚನೆಗೆ ರಷ್ಯಾ ಬೆಂಬಲ ಮತ್ತು ಈ ಪ್ರದೇಶಗಳ ಮೇಲೆ ಆರ್ಥಿಕ ಹೂಡಿಕೆಗೆ ಅಮೆರಿಕ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿದೆ.

  • #UPDATE The UN will hold an emergency Security Council meeting on the Ukraine crisis at 9:00 pm (0200 GMT) Monday, diplomats tell AFP

    Russia, which currently holds the rotating presidency of the Council, eventually accepted US demands it be an open meeting, the diplomats say pic.twitter.com/EkW0Kp6jk4

    — AFP News Agency (@AFP) February 22, 2022 " class="align-text-top noRightClick twitterSection" data=" ">

ಪೂರ್ವ ಉಕ್ರೇನ್‌ನಲ್ಲಿ ಬಂಡುಕೋರರ ಹಿಡಿತದಲ್ಲಿರುವ ಡೊನೆಟ್ಕ್​, ಲುಸಾಂಕ್​ ಪ್ರದೇಶದಲ್ಲಿ 'ಶಾಂತಿಪಾಲನಾ ಕಾರ್ಯಾಚರಣೆ' ಪ್ರಾರಂಭಿಸಲು ತನ್ನ ಸೈನ್ಯಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಉಕ್ರೇನ್‌ನ ಡೊನೆಟ್ಕ್​ ಪೀಪಲ್ಸ್ ರಿಪಬ್ಲಿಕ್ (ಡಿಎನ್‌ಆರ್) ಮತ್ತು ಲುಸಾಂಕ್​ ಪೀಪಲ್ಸ್ ರಿಪಬ್ಲಿಕ್ (ಎಲ್‌ಎನ್‌ಆರ್) ಪ್ರದೇಶದಲ್ಲಿ ಹೊಸ ಹೂಡಿಕೆ, ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.

ಎರಡು ರಾಷ್ಟ್ರಗಳ ನಿರ್ಧಾರದಿಂದುಂಟಾಗುವ ಅಪಾಯವನ್ನು ತಡೆಯಲು ವಿಶ್ವಸಂಸ್ಥೆ ತುರ್ತಾಗಿ ಭದ್ರತಾ ಮಂಡಳಿಯ ಸಭೆ ಕರೆದಿದೆ.

ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ರಷ್ಯಾ ಬೆಂಬಲಿತ ಉಕ್ರೇನ್ ಪ್ರದೇಶಗಳ ಮೇಲೆ ಅಮೆರಿಕ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.