ವಿಶ್ವಸಂಸ್ಥೆ: ಗಿನಿಯಾ ಮತ್ತು ಕಾಂಗೋದಲ್ಲಿ ಕಾಣಿಸಿಕೊಂಡ ಹೊಸ ರೂಪ ಹೊಂದಿರುವ ಎಬೊಲಾ ಎದುರಿಸಲು ವಿಶ್ವಸಂಸ್ಥೆ ತನ್ನ ತುರ್ತು ಪರಿಹಾರ ನಿಧಿಯಿಂದ 15 ಮಿಲಿಯನ್ ಡಾಲರ್ ಬಿಡುಗಡೆ ಮಾಡುವುದಾಗಿ ಹೇಳಿದೆ.
ಹೊಸ ರೂಪ ಹೊಂದಿರುವ ಸಾಂಕ್ರಮಿಕ ರೋಗ ಎಬೋಲಾ ವಿರುದ್ಧ ಹೋರಾಡಲು ಗಿನಯಾ ಮತ್ತು ಕಾಂಗೋ ದೇಶಗಳಿಗೆ 15 ಮಿಲಿಯನ್ ಡಾಲರ್ಗಳನ್ನು ನೀಡಲು ವಿಶ್ವಸಂಸ್ಥೆ ನಿರ್ಧರಿಸಿದೆ ಎಂದು ಯು.ಎನ್. ಮಾನವೀಯ (ಹ್ಯುಮಾನಿಟೇರಿಯನ್) ಮುಖ್ಯಸ್ಥ ಮಾರ್ಕ್ ಲೊಕಾಕ್ ಹೇಳಿದ್ದಾರೆ.
ಎರಡು ದೇಶಗಳಿಗೆ ಹಣದ ನೆರವು ನೀಡಲಾಗುತ್ತಿದೆ. ಈ ಮೂಲಕ ನೆರೆ ರಾಷ್ಟ್ರಗಳು ಸಹಾಯಕ್ಕೆ ಮುಂದಾಗಬೇಕು ಎಂದು ಯು.ಎನ್ ವಕ್ತಾರ ಸ್ಟೀಫನ್ ಡುಜಾರಿಕ್ ಮನವಿ ಮಾಡಿದ್ದಾರೆ.
2016 ರಲ್ಲಿ ಕಾಣಿಸಿಕೊಂಡ ನಂತರ ಗಿನಿಯಾದಲ್ಲಿ ಎಬೋಲಾ ಪ್ರಕರಣಗಳು ದಾಖಲಾಗುತ್ತಿರುವುದು ಇದೇ ಮೊದಲು. ಪಶ್ಚಿಮ ಆಫ್ರಿಕಾದ ರಾಷ್ಟ್ರವು ಎಬೋಲಾವನ್ನು ಸಾಂಕ್ರಾಮಿಕ ರೋಗವನ್ನು ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ಎಬೋಲಾಗೆ ಕನಿಷ್ಠ ಮೂವರು ಸಾವನ್ನಪ್ಪಿದ್ದು, ನಾಲ್ವರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ನೆರೆ ರಾಷ್ಟ್ರಗಳಾದ ಸಿಯೆರಾ ಲಿಯೋನ್ ಮತ್ತು ಲೈಬೀರಿಯಾಗಳು ಗಿನಿಯಾದಲ್ಲಿನ ಪರಿಸ್ಥಿತಿ ಕಂಡು ತಮ್ಮ ನಾಗರಿಕರನ್ನು ತೀವ್ರ ಎಚ್ಚರಿಕೆಯಿಂದಿರಲು ಹೇಳಿವೆ. ಮೂರು ರಾಷ್ಟ್ರಗಳು 2014 ರಿಂದ 2016 ರವರೆಗೆ ವಿಶ್ವದ ಮಾರಕ ಎಬೋಲ ವಿರುದ್ಧ ಹೋರಾಡಿದ್ದವು. ಈ ರೋಗ ಗಿನಿಯಾದಲ್ಲಿ ಕಾಣಿಸಿಕೊಂಡಿದ್ದು, ಆಗ ಈ ಡೆಡ್ಲಿ ವೈರಸ್ಗೆ 11,300 ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.
ಕಾಂಗೋದಲ್ಲಿ ಆಗಸ್ಟ್ 2018 ರಿಂದ ಜೂನ್ 2020 ರವರೆಗೆ 2,200 ಕ್ಕೂ ಹೆಚ್ಚು ಜೀವಗಳನ್ನು ಎಬೋಲಾ ಬಲಿ ಪಡೆದಿದೆ ಎಂದು ಡುಜಾರಿಕ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನಿರ್ದಿಷ್ಟ ಅಗತ್ಯತೆಗಳು ಮತ್ತು ಅಗತ್ಯತೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆದು 15 ಮಿಲಿಯನ್ ಡಾಲರ್ಗಳನ್ನು ಹಂಚಲಾಗುವುದೆಂದು ಡುಜಾರಿಕ್ ಹೇಳಿದರು.