ETV Bharat / lifestyle

ಅನುವಂಶಿಕ ಅಸಹಜ ಜೀನ್​ನಲ್ಲಿನ ಬದಲಾವಣೆಯಿಂದ ಮೆದುಳಿನ ಕಾಯಿಲೆ: ಈ ಬಗ್ಗೆ ಸಂಶೋಧನೆ ಹೇಳಿದ್ದೇನು? - New genetic disorder

ಅನುವಂಶಿಕ ಅಸಹಜ ಜೀನ್​ನಲ್ಲಿನ ಆಗುವ ಬದಲಾವಣೆಯಿಂದ ಮೆದುಳಿನ ಕಾಯಿಲೆಗೆ ಸಂಬಂಧಿಸಿ ನೂತನ ಸಂಶೋಧನೆ ನಡೆದಿದೆ. ಈ ಸಂಶೋಧನೆಯು ಮೆದುಳಿನ ರೋಗಗ್ರಸ್ತವಾಗುವಿಕೆ, ಬೆಳವಣಿಗೆ ವಿಳಂಬ ಮತ್ತು ಮೈಲೀನೇಶನ್​ನಲ್ಲಿನ ದೋಷಗಳನ್ನು ಉಂಟು ಮಾಡುವ ಅಸ್ವಸ್ಥತೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಸ್ಟೋರಿ ಓದಿ.

New genetic disorder  new research  brain disease  Udupi
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Sep 30, 2024, 8:32 PM IST

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗ ಸಂಸ್ಥೆ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ.ಅಂಜು ಶುಕ್ಲಾ ನೇತೃತ್ವದ ತಂಡವು ಅಮೆರಿಕದ ಮಿಚಿಗನ್ ವಿವಿಯ ಸ್ವೀಪನಿ ಬಿಲಾಸ್, ಪಿಟ್ಸ್ಬರ್ಗ್ ವಿವಿಯ ಡಾ.ಕ್ಲಾಸರ್ ಪ್ಯಾಡಿಟ್ ಸಹಭಾಗಿತ್ವದಲ್ಲಿ ನಡೆಸಿದ ಸಂಶೋಧನೆಯಲ್ಲಿ ಇಪಿಬಿ-41 ಎಲ್-3 (ಇಪಿಬಿ41 ಎಲ್3) ಅನುವಂಶಿಕ ಅಸಹಜ ಜೀನ್​ನಲ್ಲಿ (ಧಾತುವಿನ) ನ್ಯೂನತೆಗೆ ಸಂಬಂಧಿಸಿ ಹೊಸ ಅನುವಂಶೀಯ ಮೆದುಳಿನ ಅಸ್ವಸ್ಥತೆ (ನ್ಯೂ ಜೆನಿಟಿಕ್ ಡಿಸ್ ಆರ್ಡರ್) ಶೋಧಿಸಿದ್ದಾರೆ.

New genetic disorder  new research  brain disease  Udupi
ಅನುವಂಶಿಕ ಅಸಹಜ ಜೀನ್​ನಲ್ಲಿನ ಬದಲಾವಣೆಯಿಂದ ಮೆದುಳಿನ ಕಾಯಿಲೆಗೆ ಸಂಬಂಧಿಸಿ ನೂತನ ಸಂಶೋಧನೆ (ETV Bharat)

ಸಂಶೋಧನೆ ಏನು ಹೇಳುತ್ತೆ?: ಈ ಅವಿಷ್ಕಾರವು ಮೆದುಳಿನ ರೋಗಗ್ರಸ್ತವಾಗುವಿಕೆ, ಬೆಳವಣಿಗೆಯ ವಿಳಂಬ ಮತ್ತು ಮೈಲೀನೇಶನ್​ನಲ್ಲಿನ ದೋಷಗಳನ್ನು ಉಂಟು ಮಾಡುವ ಅಸ್ವಸ್ಥತೆಯ ಮೇಲೆ ಬೆಳಕು ಚೆಲ್ಲುತ್ತದೆ. ಮೆದುಳಿನಲ್ಲಿನ ನರಗಳ ರಕ್ಷಣೆ ಮತ್ತು ತಡೆಗಟ್ಟುವಿಕೆಯು ಇದು ಪ್ರಮುಖ ಪ್ರಕ್ರಿಯೆಯಾಗಿದೆ. ಇಪಿಬಿ-41 ಎಲ್-3 (ಇಪಿಬಿ- 41 ಎಲ್-3) ಅನುವಂಶಿಕ ಅಸಹಜ ಜೀನ್​ನಲ್ಲಿ (ಧಾತುವಿನ) ಆಗುವ ಬದಲಾವಣೆ ಮಿದುಳಿನ ಕಾಯಿಲೆಗೆ ಸಂಬಂಧಿಸಿದೆ. ಅನುವಂಶೀಯ ಮೆದುಳಿನ ಕಾಯಿಲೆಗೆ ಸಂಬಂಧಿಸಿದಂತೆ ಹೊಸ ಆವಿಷ್ಕಾರವನ್ನು ಪ್ರಥಮ ಬಾರಿಗೆ ಕಂಡು ಹಿಡಿಯಲಾಗಿದೆ. ಈ ಸಂಶೋಧನೆಯಲ್ಲಿ ಡಾ.ಪೂರ್ವಿ ಮಜೇತಿಯ, ಡಾ.ಎಲಿಜಬೆತ್ ವೆರ್ನ್, ಡಾ.ಗ್ಯುಲಿರ್ಮೋ ರೋಡ್ರಿಗಸ್ ಬೇ ಪಾಲ್ಗೊಂಡಿದ್ದರು.

ಜೊತೆಗೆ ಜಗತ್ತಿನಾದ್ಯಂತ ಅನೇಕ ತಜ್ಞರು ಈ ಸಂಶೋಧನೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ಸಂಶೋಧನೆಯು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂಶೋಧನಾ ಕಾರ್ಯಗಳಿಗೆ ವಿಶೇಷ ಪ್ರೋತ್ಸಾಹ ಮತ್ತು ಪೂರಕ ಸಂಶೋಧನಾ ವಾತಾವರಣ ಇರುವುದನ್ನು ಸೂಚಿಸುತ್ತದೆ ಎಂದು ಕೆಎಂಸಿಯ ಸಂಶೋಧನ ತಂಡದ ಮುಖ್ಯಸ್ಥ ಡಾ.ಅಂಜು ಶುಕ್ಲಾ ತಿಳಿಸಿದ್ದಾರೆ.

ಜೀನೋಮ್ ವಿಶ್ಲೇಷಣೆ: ಡಾ.ಅಂಜು ಶುಕ್ಲಾ ಮತ್ತು ಅವರ ತಂಡವು ನಾಲ್ಕು ವರ್ಷದ ಬಾಲಕನೊಬ್ಬನ ಕುಂಠಿತ ಬೆಳವಣಿಗೆ ಮತ್ತು ಪೂರ್ಣ ದತ್ತಾಂಶ (ಜೀನೋಮ್)ದ ಅಧ್ಯಯನ ರೋಗನಿರೋಧಕ ಶಕ್ತಿಯ ಕೊರತೆಗೆ ಸಂಬಂಧಿಸಿದಂತೆ ಈ ಸಂಶೋಧನಾ ಪಯಣ ಆರಂಭ ಗೊಂಡಿತ್ತು. ತಂಡದ ಜೀನೋಮ್ ವಿಶ್ಲೇಷಣೆಯು ಇಪಿಬಿ-41 ಎಲ್-3 (ಇಪಿಬಿ41 ಎಲ್3) ನ್ಯೂನತೆಯ ಸಂಭವನೀಯತೆಯನ್ನು ಪ್ರಸ್ತಾವಿಸಿತ್ತು. ಅಂತಾರಾಷ್ಟ್ರೀಯ ಸಂಶೋಧಕರ ಸಹಭಾಗಿತ್ವದಿಂದಾಗಿ ಫ್ರಾನ್ಸ್, ಈಜಿಪ್ಟ್, ಪಾಕಿಸ್ತಾನ ದೇಶಗಳಲ್ಲಿಯೂ ಸಮಾನ ಸಮಸ್ಯೆ ಇರುವಂತ ರೋಗಿಗಳನ್ನು ಗುರುತಿಸಿ ಈ ಸಮಸ್ಯೆಗೆ ಸಂಬಂಧಿಸಿದ ಕಾರಣವು ದೃಢಪಟ್ಟಿತ್ತು.

ಈಟಿವಿ ಭಾರತ ಜೊತೆಗೆ ಮಾತನಾಡಿದ ಮಾಹೆ ವಿವಿ ಮಣಿಪಾಲನ ವಿಜ್ಞಾನ ವಿಭಾಗಿಯ ಸಹಕುಲಪತಿ ಡಾ.ಶರತ್ ರಾವ್ , ''ಅನುವಂಶಿಕ ಮೆದುಳು ಕಾಯಿಲೆಗೆ ಸಂಬಂಧಿಸಿದ ಸಂಕೀರ್ಣ ಸವಾಲು ನಿಭಾಯಿಸುವಲ್ಲಿ ಈ ಅಂತಾರಾಷ್ಟ್ರೀಯ ಸಹಭಾಗಿತ್ವವು ಪ್ರಧಾನ ಪಾತ್ರ ವಹಿಸಲಿದೆ. ಭಾರತದಲ್ಲಿ ಬೆಳೆಯುತ್ತಿರುವ ಜಾಗತಿಕ ಮಟ್ಟದ ಜೀನೋಮಿಕ್ ಸಂಶೋಧನೆಯ ಕ್ಷೇತ್ರದ ಭಾಗವಾಗಲು ಮಾಹೆ ತುಂಬ ಅಭಿಮಾನ ಪಡುತ್ತದೆ'' ಎಂದು ವಿವರಿಸಿದ್ದಾರೆ.

ಮಾಹೆ ವಿವಿ ಮಣಿಪಾಲನ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಅವರು, ''ನವ ಸಂಶೋಧನಾ ಫಲಿತಾಂಶವು ಪ್ರಸಿದ್ದ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ. ಇದು ಮಾಹೆಯ ಸಂಶೋಧನೆಗೆ ಸಿಕ್ಕಿ ಮಾನ್ಯತೆಯಾಗಿದೆ. ಈ ವೈಜ್ಞಾನಿಕ ಸಂಶೋಧನ ಸಹಭಾಗಿತ್ವವು ಅನುವಂಶಿಕ ಮೆದುಳಿನ ಕಾಯಿಲೆಗೆ ಸಂಬಂಧಿಸಿದ ವೈದ್ಯಕೀಯ ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಕೊಡುಗೆ ಎತ್ತಿ ತೋರಿಸುತ್ತದೆ'' ಎಂದು ಅವರು ತಿಳಿಸಿದ್ದಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.