ETV Bharat / international

ಲಸಿಕೆ ವಿತರಣೆಯಲ್ಲಿನ ಅಸಮತೋಲನ ಸರಿದೂಗಿಸಲು ಸದೃಢ ದೇಶಗಳಿಗೆ ಕರೆ - ಅನ್ಯಾಯ ಮತ್ತು ಅಸಮತೋಲನದಿಂದ ಕೂಡಿದೆ

ಕೋವಿಡ್​ ಲಸಿಕೆ ವಿತರಣೆ ಕುರಿತು ವರ್ಚುಯಲ್ ಸಭೆ ನಡೆಸಿದ ವೇಳೆ ಜಗತ್ತಿನಲ್ಲಿ ಲಸಿಕೆ ವಿತರಣೆಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಇದೊಂದು ಅನ್ಯಾಯದ ಲಸಿಕೆ ವಿತರಣೆ ಎಂದು ಅಭಿಪ್ರಾಯಪಟ್ಟರು.

un-chief-urges-global-plan-to-reverse-unfair-vaccine-access
ಲಸಿಕೆ ವಿತರಣೆಯಲ್ಲಿನ ಅಸಮತೋಲನ ಸರಿದೂಗಿಸಲು ಸದೃಢ ದೇಶಗಳಿಗೆ ಕರೆ
author img

By

Published : Feb 18, 2021, 4:13 PM IST

ನ್ಯೂಯಾರ್ಕ್​​​​: ಜಗತ್ತಿನಲ್ಲಿ ಕೋವಿಡ್​ ಲಸಿಕೆ ವಿತರಣೆಯು ತೀವ್ರ ಅನ್ಯಾಯ ಮತ್ತು ಅಸಮತೋಲನದಿಂದ ಕೂಡಿದೆ ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ತೀಕ್ಷ್ಣವಾಗಿ ಟೀಕಿಸಿದ್ದಾರೆ.

10 ರಾಷ್ಟ್ರಗಳು ಶೇ.75ರಷ್ಟು ಲಸಿಕೆ ವಿತರಣೆ ನಡೆಸಿದ್ದು, ಜಗತ್ತಿನಲ್ಲಿ ಎಲ್ಲರೂ ಆದಷ್ಟು ಬೇಗ ಲಸಿಕೆ ಪಡೆಯಬೇಕು ಎನ್ನುತ್ತಿವೆ. ಹೀಗಾಗಿ ಎಲ್ಲ ದೇಶಗಳಲ್ಲೂ ಸಮಾನವಾದ ಲಸಿಕೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಜಾಗತಿಕ ವ್ಯಾಕ್ಸಿನೇಷನ್ ಯೋಜನೆಗೆ ಗುಟೆರೆಸ್ ಕರೆ ನೀಡಿದ್ದಾರೆ.

ಇಂತಹ ಯೋಜನೆಯನ್ನು ಕಾರ್ಯಗತಗೊಳಿಸಲು ಹಾಗೂ ಧನಸಹಾಯಕ್ಕಾಗಿ ತುರ್ತು ಕಾರ್ಯಪಡೆ ರಚನೆಗಾಗಿ ಜಿ -20 ಗುಂಪಿನಲ್ಲಿರುವ ಪ್ರಮುಖ ಆರ್ಥಿಕ ದೇಶಗಳು ಒಗ್ಗೂಡಬೇಕು ಎಂದು ಕರೆ ನೀಡಿದ್ದಾರೆ. ಕೈಗಾರೀಕರಣಗೊಂಡಿರುವ 7 ಪ್ರಮುಖ ರಾಷ್ಟ್ರಗಳ ಜೊತೆಗಿನ ಸಭೆಯಕಲ್ಲಿ ಮಾತನಾಡಿದ ಗುಟೆರಸ್​​, ಅಮೆರಿಕ, ಜರ್ಮನಿ, ಜಪಾನ್, ಬ್ರಿಟನ್, ಕೆನಡಾ, ಫ್ರಾನ್ಸ್ ಮತ್ತ ಇಟಲಿ ರಾಷ್ಟ್ರಗಳು ಅಗತ್ಯ ಆರ್ಥಿಕ ಸಂಪನ್ಮೂಲಗಳ ಸಜ್ಜುಗೊಳಿಸಬೇಕಿದೆ ಎಂದಿದ್ದಾರೆ.

ಕೋವಿಡ್​ ಲಸಿಕೆ ವಿತರಣೆ ಕುರಿತು ವರ್ಚುಯಲ್ ಸಭೆ ನಡೆಸಿದ ವೇಳೆ ಜಗತ್ತಿನಲ್ಲಿ ಲಸಿಕೆ ವಿತರಣೆಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಇದೊಂದು ಅನ್ಯಾಯದ ಲಸಿಕೆ ವಿತರಣೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಡ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ತ್ವರಿತಗತಿಯಲ್ಲಿ ಸಾಗಿಸಲು ಯುನಿಸೆಫ್​ ಹೊಸ ಪ್ಲಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.