ETV Bharat / international

ರಿಪಬ್ಲಿಕನ್ ಯುಎಸ್ ಕಾಂಗ್ರೆಸ್ ವುಮನ್ ಗ್ರೀನ್ ಟ್ವಿಟರ್​​ ಖಾತೆ ತಾತ್ಕಾಲಿಕ ಸ್ಥಗಿತ - ರಿಪಬ್ಲಿಕನ್ ಯುಎಸ್ ಕಾಂಗ್ರೆಸ್ ವುಮನ್ ಗ್ರೀನ್ ಖಾತೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಟ್ವಿಟರ್​

ಜಾರ್ಜಿಯಾದ ರಿಪಬ್ಲಿಕನ್ ಯುಎಸ್ ಕಾಂಗ್ರೆಸ್ ವುಮನ್ ರೆಪ್ ಮಾರ್ಜೋರಿ ಟೇಲರ್ ಗ್ರೀನ್ ಪ್ರಚೋದನಕಾರಿ ವಿಡಿಯೋಗಳು ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಫಾಲೋಯಿಂಗ್ ಗಳಿಸಿದ್ದಾರೆ

Twitter suspends US congresswoman over election fraud claims
ರಿಪಬ್ಲಿಕನ್ ಯುಎಸ್ ಕಾಂಗ್ರೆಸ್ ವುಮನ್ ಗ್ರೀನ್ ಖಾತೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಟ್ವಿಟರ್​
author img

By

Published : Jan 18, 2021, 10:56 AM IST

ವಾಷಿಂಗ್ಟನ್: ಜಾರ್ಜಿಯಾದ ರಿಪಬ್ಲಿಕನ್ ಯು.ಎಸ್.ಕಾಂಗ್ರೆಸ್ ವುಮನ್ ರೆಪ್ ಮಾರ್ಜೋರಿ ಟೇಲರ್ ಗ್ರೀನ್ ಅವರ ಖಾತೆಯನ್ನು ಟ್ವಿಟರ್ ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಗ್ರೀನ್‌ನ ಖಾತೆಯನ್ನು "ವಿವರಣೆಯಿಲ್ಲದೆ" ಅಮಾನತುಗೊಳಿಸಲಾಗಿದೆ ಎಂದು ಟೇಲರ್ ಆರೋಪಿಸಿದ್ದಾರೆ. 46 ವರ್ಷದ ಉದ್ಯಮಿಗಿರುವ ಇವರು ನವೆಂಬರ್‌ನಲ್ಲಿ ಜಾರ್ಜಿಯಾದ 14 ನೇ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾದರು. ಪ್ರಚೋದನಕಾರಿ ವಿಡಿಯೋಗಳು ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಫಾಲೋಯಿಂಗ್ ಗಳಿಸಿದ್ದಾರೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶತ್ರುಗಳ ವಿರುದ್ಧ ರಹಸ್ಯ ಅಭಿಯಾನ ನಡೆಸುತ್ತಿದ್ದಾರೆ ಎಂಬ ನಂಬಿಕೆಯ ಸುತ್ತ ಕೇಂದ್ರೀಕೃತವಾಗಿರುವ ಬಲಪಂಥೀಯ ಯುಎಸ್ ಪಿತೂರಿ ಸಿದ್ಧಾಂತವಾದ ಕ್ಯೂಎನಾನ್ ಅನ್ನು ಸಹ ಅವರು ಸ್ವೀಕರಿಸಿದ್ದಾರೆ. ಅವರು ಹೇಳುವ ಮಕ್ಕಳ ಲೈಂಗಿಕ ಕಳ್ಳಸಾಗಣೆ ಜಾಲ ಡೆಮೋಕ್ರಾಟ್​ಗಳೊಂದಿಗೆ ಸಂಪರ್ಕಿಸಲಾಗಿದೆ.

ಭಾನುವಾರ ಮಧ್ಯಾಹ್ನದ ಮೊದಲು ಗ್ರೀನ್ ಅವರು ಸ್ಥಳೀಯ ಸುದ್ದಿವಾಹಿನಿಯೊಂದರ ಸಂದರ್ಶನದ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಜಾರ್ಜಿಯಾದ ಚುನಾವಣಾ ಅಧಿಕಾರಿಗಳನ್ನು ಖಂಡಿಸಿದ್ದು, ಮತದಾನ ಯಂತ್ರಗಳು, ಗೈರುಹಾಜರಿ ಮತಪತ್ರಗಳು ಮತ್ತು ಇತರ ವಿಷಯಗಳು ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ವ್ಯಾಪಕ ವಂಚನೆಗೆ ಕಾರಣವಾಗಿದೆ ಎಂದು ಹೇಳುವ ಮೂಲಕ ನಿರಾಕರಿಸಿದ ಸಿದ್ಧಾಂತಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಅವರ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ಟ್ವಿಟರ್​ ಮತ್ತು ಇತರರು, ಈ ತರಹದ ಪೋಸ್ಟ್​ಗಳು ವಿವಾದಿತ ಮತ್ತು ಪ್ರಚೋದನಕಾರಿಯಾಗಿವೆ ಎಂದು ಹೇಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.