ವಾಷಿಂಗ್ಟನ್: ಇರಾನಿನ ಮಿಲಿಟರಿ ಕಮಾಂಡರ್ ಕ್ವಾಸೆಮ್ ಸುಲೇಮಾನಿ, ಯಾವುದೇ ದೃಷ್ಟಿಕೋನದಿಂದ ನೋಡಿದರು ಜಗತ್ತಿನ ಅಪಾಯಕಾರಿ ನಂಬರ್ ಒನ್ ಟೆರರಿಸ್ಟ್. ಈ ವ್ಯಕ್ತಿಯೊಬ್ಬನೇ ಬಹಳಷ್ಟು ಅಮೆರಿಕನ್ನರನ್ನ ಕೊಂದು ಹಾಕಿದ್ದಾನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಅಮೆರಿಕನ್ನರು ಅಷ್ಟೇ ಅಲ್ಲ ಹಲವು ಮಂದಿಯನ್ನ ನಿರ್ದಯವಾಗಿ ಕೊಂದು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುಲೇಮಾನಿಯನ್ನ ಕೊಂದು ಹಾಕಬೇಕಾಯಿತು ಎಂದು ಡೊನಾಲ್ಡ್ ಟ್ರಂಪ್ ಸುಲೇಮಾನಿ ಹತ್ಯೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಇರಾನ್ ಮೇಲಿನ ದಾಳಿಯನ್ನು ಖಂಡಿಸಿರುವ ಹೌಸ್ ರೆಪ್ರೆಸೆಂಟಿಟಿವ್ನ ಕ್ರಮ ಹಾಗೂ ತಮ್ಮ ಮೇಲೆ ಹಾಕಿರುವ ಕೆಲ ನಿರ್ಬಂಧಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೆಮಾಕ್ರಟ್ಸ್ಗಳು ಸುಲೇಮಾನಿಯನ್ನ ಸಮರ್ಥಿಸಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ದೇಶದ ನಿರ್ಣಯವನ್ನ ಒಪ್ಪುವುದಿಲ್ಲವೇ ಎಂದು ಸವಾಲು ಕೂಡಾ ಹಾಕಿದ್ದಾರೆ.