ETV Bharat / international

ವೇದಿಕೆ ಮೇಲೆ ಮತ್ತೆ ಟ್ರಂಪ್: ಜಿ-20 ಶೃಂಗಸಭೆಯಲ್ಲಿ ಭಾಗಿ

ಇತ್ತೀಚಿಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಜಯದಾಖಲಿಸಿದ ಬಳಿಕ ಅವರ ಜಯ ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ್ದರು. ಅಲ್ಲದೇ ಚುನಾವಣಾ ಪ್ರಕ್ರಿಯೆ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದರು. ಈ ಎಲ್ಲಾ ಪ್ರಕ್ರಿಯೆಗಳ ಬಳಿಕ ಇದೀಗ ಶೃಂಗ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.

trump-to-participate-in-virtual-g20-summit-amid-covid-19-surge
ಜಿ-20 ಶೃಂಗಸಭೆಯಲ್ಲಿ ಎರಡು ದಿನ ಭಾಗಿ
author img

By

Published : Nov 21, 2020, 1:01 PM IST

ವಾಷಿಂಗ್ಟನ್​: ರಷ್ಯಾ ಆಯೋಜಿಸಿರುವ ವರ್ಚುಯಲ್ ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗಿಯಾಗಲಿದ್ದಾರೆ ಎಂದು ಶ್ವೇತಭವನ ಅಧಿಕೃತವಾಗಿ ತಿಳಿಸಿದೆ. ಶ್ವೇತಭವನ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಟ್ರಂಪ್ ಈ ವಾರದ ಇಂದು ಮತ್ತು ನಾಳೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದೆ.

ಕೊರೊನಾ ಕಾರಣದಿಂದಾಗಿ ಈ ಬಾರಿಯ ಶೃಂಗ ಸಭೆಯನ್ನು ವರ್ಚುಯಲ್​​ ಮೂಲಕ ನೆರವೇರಿಸಲು ನಿರ್ಧರಿಸಲಾಯಿತು. ಶೃಂಗಸಭೆಗೆ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ.19 ಪ್ರಮುಖ ಆರ್ಥಿಕ ದೇಶಗಳು ಹಾಗೂ ಯುರೋಪಿಯನ್ ಒಕ್ಕೂಟ ಒಳಗೊಂಡಿರುವ ಸಭೆಯೂ ಈ ಬಾರಿ ಆನ್​ಲೈನ್​ನಲ್ಲಿಯೇ ನಡೆಯುತ್ತಿದೆ.

ಇತ್ತೀಚಿಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಜಯದಾಖಲಿಸಿದ ಬಳಿಕ ಅವರ ಜಯ ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ್ದರು. ಅಲ್ಲದೇ ಚುನಾವಣಾ ಪ್ರಕ್ರಿಯೆ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಪ್ರಕ್ರಿಯೆಗಳ ಬಳಿಕ ಇದೀಗ ಶೃಂಗ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಕಳೆದ ಶುಕ್ರವಾರ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಹೇಳಿಕೆ ನೀಡಿದ್ದ ಟ್ರಂಪ್​, ತಮ್ಮ ಆಡಳಿತವು ಕೊರೊನಾ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರೀಯ ಲಾಕ್‌ಡೌನ್ ಅನ್ನು ಪ್ರತಿಪಾದಿಸುವುದಿಲ್ಲ ಮತ್ತು ಅಂತಹ ನಿರ್ಬಂಧವನ್ನು ಜಾರಿಗೆ ತರುವಲ್ಲಿ ಯೋಜಿಸುತ್ತಿದ್ದ ಬೈಡನ್ ಆಡಳಿತನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.