ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ ನಾಲ್ಕನೇ ಅತಿದೊಡ್ಡ ನಗರವಾದ ಹೂಸ್ಟನ್‌ನಲ್ಲಿ ಕಾರ್ ಪರೇಡ್ ಆಯೋಜಿಸಿದ್ದರು.
ಭಾನುವಾರ ನಡೆದ ಕಾರು ಪರೇಡ್ನಿಂದ ನಗರದ ಹೆದ್ದಾರಿಯುದ್ದಕ್ಕೂ ಸುಮಾರು 11.2 ಕಿ.ಮೀ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಹೂಸ್ಟನ್ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೊ ತಿಳಿಸಿದ್ದಾರೆ. ಸಂಚಾರ ದಟ್ಟಣೆಯ ಹಿನ್ನೆಲೆ ಸೌತ್ ಲೂಪ್ 610 ಮಾರ್ಗದ ಸಂಚಾರ ಬದಲಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಸೂಚಿಸಿದ್ದರು.
ಟೆಕ್ಸಾಸ್ ರಾಜ್ಯದಲ್ಲಿ ಟ್ರಂಪ್ ಪರ ಚುನಾವಣಾ ಪ್ರಚಾರ ನಡೆಸುವ ಸಲುವಾಗಿ ಭಾನುವಾರದ ಕಾರ್ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಟೆಕ್ಸಾಸ್ ಅತ್ಯಂತ ಪ್ರಮುಖ ರಾಜ್ಯವೆಂದು ಪರಿಗಣಿಸಲಾಗಿದೆ.
2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಒಟ್ಟು 52.23 ರಷ್ಟು ಮತಗಳ ಮೂಲಕ ಜಯಗಳಿಸಿದ್ದರು. ಅವರು ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ 43.24 ರಷ್ಟು ಮತ ಗಳಿಸಿದ್ದರು. ಇತ್ತೀಚಿನ ಸಿಎನ್‌ಎನ್ ಸಮೀಕ್ಷೆಯ ಪ್ರಕಾರ, ಟ್ರಂಪ್ ಪ್ರಸ್ತುತ ಶೇಕಡಾ 48 ರಿಂದ 46 ರಷ್ಟು ಮತಗಳ ಅಂತರದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ಗಿಂತ ಇಲ್ಲಿ ಮುನ್ನಡೆ ಸಾಧಿಸಿದ್ದಾರೆ.