ETV Bharat / international

ಜಮ್ಮು-ಕಾಶ್ಮೀರ ಇಲ್ಲದ ಭಾರತದ ಮ್ಯಾಪ್ ಪೋಸ್ಟ್: ಚುನಾವಣೆಯ ದಿನ ಟ್ರಂಪ್ ಪುತ್ರನ ಅಚಾತುರ್ಯ - ಅಮೆರಿಕ ಚುನಾವಣೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನವೇ ಟ್ರಂಪ್ ಪುತ್ರ ಅಚಾತುರ್ಯ ಮೆರೆದಿದ್ದಾನೆ. ಜಮ್ಮು ಕಾಶ್ಮೀರ ಬಿಟ್ಟು ಭಾರತದ ಮ್ಯಾಪ್ ಪೋಸ್ಟ್ ಮಾಡಿದ್ದಾರೆ.

Trump son
ಟ್ರಂಪ್ ಪುತ್ರನ ಅಚಾತುರ್ಯ
author img

By

Published : Nov 4, 2020, 4:46 AM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ದಿನ ಡೊನಾಲ್ಡ್ ಟ್ರಂಪ್ ಪುತ್ರ, ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿ ಪೆದ್ದತನ ಪ್ರದರ್ಶಿಸಿದ್ದಾರೆ.

ಟ್ರಂಪ್ ಪುತ್ರ ಟ್ವೀಟರ್​ನಲ್ಲಿ ಪೋಸ್ಟ್ ಮಾಡಿರುವ ವಿಶ್ವದ ನಕ್ಷೆಯಲ್ಲಿ ಭಾರತದಲ್ಲಿ ಜಮ್ಮು ಕಾಶ್ಮೀರವಿಲ್ಲ. ಜಮ್ಮು ಕಾಶ್ಮೀರವು ಪಾಕಿಸ್ತಾನದ ಭಾಗ ಎಂಬಂತೆ ತೋರಿಸಿ ಅಚಾತುರ್ಯ ಮೆರೆದಿದ್ದಾರೆ.

ಟ್ರಂಪ್ ಪುತ್ರನ ಪ್ರಪಂಚದ ನಕ್ಷೆ ಬಹುಪಾಲು ಕೆಂಪು ಬಣ್ಣದಿಂದ ತುಂಬಿದ್ದು, ರಿಪಬ್ಲಿಕನ್ ಪಕ್ಷದ ಬಣ್ಣ ಕೂಡ ಕೆಂಪು. ಈ ಹಿನ್ನೆಲೆ ತಮ್ಮ ತಂದೆ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.

ಆದ್ರೆ ನಕ್ಷೆಯಲ್ಲಿ ಭಾರತದ ಬಣ್ಣ ನೀಲಿ ಆಗಿದ್ದು, ಬಿಡೆನ್​ಗೆ ಬೆಂಬಲ ನೀಡಲಿದೆ ಅನ್ನುವ ಹಾಗೇ ತೋರಿಸಿದ್ದಾರೆ. ಆದ್ರೆ ಭಾರತದ ಜಮ್ಮು ಕಾಶ್ಮೀರವನ್ನು ಕೆಂಪು ಬಣ್ಣದಲ್ಲಿ ತೋರಿಸಿ, ಟ್ರಂಪ್​ಗೆ ಬೆಂಬಲ ನೀಡಲಿದೆ ಎನ್ನುವ ಹಾಗೆ ಬಿಂಬಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.