ವಾಷಿಂಗ್ಟನ್: ಚೀನಾದಲ್ಲಿ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ಮೇಲೆ ಚೀನಾ ಅಧಿಕಾರಿಗಳಿಂದ ನಡೆಯುತ್ತಿರುವ ದಬ್ಬಾಳಿಕೆ ತಡೆಯುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
'2020 ರ ಉಯಿಘರ್ ಮಾನವ ಹಕ್ಕುಗಳ ಕಾಯ್ದೆ' ಎಂಬ ಮಸೂದೆಯನ್ನು ಮೇ ತಿಂಗಳಲ್ಲೇ ಟ್ರಂಪ್ಗೆ ಅಮೆರಿಕದ ಸೆನೆಟ್ (ಮೇಲ್ಮನೆ) ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ (ಕೆಳಮನೆ) ಕಳುಹಿಸಿತ್ತು.
ಬಲವಂತದಿಂದ ದುಡಿಸಿಕೊಳ್ಳುವುದು, ಅಸ್ಮಿತೆ ಮತ್ತು ಧಾರ್ಮಿಕ ಆಚರಣೆಗಳ ನಿರ್ಮೂಲನೆ ಮಾಡುವುದು ಸೇರಿದಂತೆ ಉಯಿಘರ್ ಮುಸ್ಲಿಂ ಜನಾಂಗದ ಮೇಲೆ ಚೀನಾದ ಕ್ಸಿನ್ಜಿಯಾಂಗ್ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವ ಮಸೂದೆ ಇದಾಗಿದೆ.
ಮಸೂದೆಗೆ ಸಹಿ ಹಾಕುತ್ತಿದ್ದಂತೆಯೇ ತಿರುಗೇಟು ನೀಡಿರುವ ಚೀನಾ, ಭವಿಷ್ಯದಲ್ಲಾಗುವ ಪರಿಣಾಮಗಳನ್ನು ಅಮೆರಿಕ ಎದುರಿಸಬೇಕಿದೆ ಎಂದು ಹೇಳಿದೆ.