ವಾಷಿಂಗ್ಟನ್ [ಯುಎಸ್]: ಅಮೆರಿಕದಲ್ಲಿ 24 ಮಿಲಿಯನ್ಗೂ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕುವ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದಾರೆ. ಅವರು ಅಧಿಕಾರದಿಂದ ಹೊರಬಂದ ಒಂದು ವಾರದ ನಂತರ ಜನವರಿ 26 ರಿಂದ ಜಾರಿಗೆ ಬರುವಂತೆ ಯುರೋಪ್ ಮತ್ತು ಬ್ರೆಜಿಲ್ನ ಹೆಚ್ಚಿನ ದೇಶಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ್ದಾರೆ.
ಟ್ರಂಪ್ ಹೊರಡಿಸಿದ ಕಾರ್ಯನಿರ್ವಾಹಕ ಆದೇಶದಲ್ಲಿ, ಪ್ರಯಾಣದ ನಿರ್ಬಂಧಗಳನ್ನು 26 ದೇಶಗಳು, ಯುಕೆ, ಐರ್ಲೆಂಡ್ ಮತ್ತು ಬ್ರೆಜಿಲ್ಗಳನ್ನು ಒಳಗೊಂಡಿರುವ ಷೆಂಗೆನ್ ವಲಯದ ಯುರೋಪಿಯನ್ ದೇಶಗಳಿಂದ ಮಾತ್ರ ತೆಗೆದುಹಾಕಲಾಗುತ್ತದೆ. ಈ ಆದೇಶವು ಜನವರಿ 26 ರಂದು ಬೆಳಗ್ಗೆಯಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ:'ಜಗತ್ತು ದುರಂತದ ನೈತಿಕ ವೈಫಲ್ಯದ ಅಂಚಿನಲ್ಲಿದೆ' - ಕೊರೊನಾ ಲಸಿಕೆ ವಿತರಣೆ ವಿರುದ್ಧ WHO ಬೇಸರ
ಚುನಾಯಿತ ಅಧ್ಯಕ್ಷ ಜೋ ಬೈಡನ್‌ರ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ‘ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಸಮಯ ಇದಲ್ಲ. ನಮ್ಮ ವೈದ್ಯಕೀಯ ತಂಡದ ಸಲಹೆಯ ಮೇರೆಗೆ, ಆಡಳಿತವು ಈ ನಿರ್ಬಂಧಗಳನ್ನು ತೆಗೆದುಹಾಕುವ ಉದ್ದೇಶವನ್ನು ಹೊಂದಿಲ್ಲ. ವಾಸ್ತವವಾಗಿ, ಕೊರೊನಾ ಹರಡುವುದನ್ನು ಮತ್ತಷ್ಟು ತಗ್ಗಿಸುವ ಸಲುವಾಗಿ ಅಂತಾರಾಷ್ಟ್ರೀಯ ಪ್ರಯಾಣದ ಸುತ್ತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬಲಪಡಿಸಲು ನಾವು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.