ವಾಷಿಂಗ್ಟನ್ (ಯು.ಎಸ್): ಕೋವಿಡ್ -19 ನಿರ್ಬಂಧಗಳಿಂದಾಗಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ತಮ್ಮ ಹೋಟೆಲ್ ಬದಲಿಗೆ ಶ್ವೇತಭವನದಲ್ಲಿ ಚುನಾವಣಾ ರಾತ್ರಿ ಪಾರ್ಟಿಯನ್ನು ಆಯೋಜಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಿಚಿಗನ್, ವಿಸ್ಕಾನ್ಸಿನ್ ಮತ್ತು ಮಿನ್ನೇಸೋಟದಲ್ಲಿ ಪ್ರಚಾರ ರ್ಯಾಲಿಗಳಿಗೆ ತೆರಳುವ ಮೊದಲು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ನಿರ್ಧರಿಸಿಲ್ಲ. ನಮಗೆ ಕೆಲವು ನಿಯಮಗಳು. ನಮಗೆ ಹೊಟೇಲ್ ಇದೆ. ಅದನ್ನು ಬಳಸಲು ಅನುಮತಿ ಇಲ್ಲ. ನಾವು ಬಹುಶಃ ಇಲ್ಲಿಯೇ ಇರುತ್ತೇವೆ ಅಥವಾ ಬೇರೆ ಸ್ಥಳವನ್ನು ಆರಿಸಿಕೊಳ್ಳುತ್ತೇವೆ" ಎಂದು ಹೇಳಿದ್ದರು.
ನಿಯಮಗಳ ಹೊರತಾಗಿಯೂ ಟ್ರಂಪ್ ಆಗಸ್ಟ್ನಲ್ಲಿ ತಮ್ಮ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ಭಾಷಣ ಸೇರಿದಂತೆ ಶ್ವೇತಭವನದಲ್ಲಿ ದೊಡ್ಡ ಜನಸಂದಣಿ ಕೂಡಿದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.