ವಾಷಿಂಗ್ಟನ್: ಒಸಾಮಾ ಬಿನ್ ಲಾಡೆನ್ ಪುತ್ರ, ಈತನ ನಂತರದ ಅಲ್-ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿ ಹಂಝ ಬಿನ್ ಲ್ಯಾಡೆನ್ ಹತ್ಯೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಣ ಗಡಿ ಪ್ರದೇಶದಲ್ಲಿ ಅಮೆರಿಕಾ ಭಯೋತ್ಪಾದನಾ ನಿಗ್ರಹದಳ ನಡೆಸಿದ ಕಾರ್ಯಾಚರಣೆಯಲ್ಲಿ ಹಂಝ ಬಿನ್ ಲ್ಯಾಡೆನ್ ಕೊಲ್ಲಲ್ಪಟ್ಟಿದ್ದಾನೆ ಎಂದು ಟ್ರಂಪ್ ಶ್ವೇತಭವನದಿಂದ ಬಿಡುಗಡೆ ಮಾಡಲಾದ ಸಂಕ್ಷಿಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
US President Donald Trump confirms death of Al-Qaeda heir Hamza bin Laden: AFP News Agency pic.twitter.com/ueoKftwHq9
— ANI (@ANI) September 14, 2019 " class="align-text-top noRightClick twitterSection" data="
">US President Donald Trump confirms death of Al-Qaeda heir Hamza bin Laden: AFP News Agency pic.twitter.com/ueoKftwHq9
— ANI (@ANI) September 14, 2019US President Donald Trump confirms death of Al-Qaeda heir Hamza bin Laden: AFP News Agency pic.twitter.com/ueoKftwHq9
— ANI (@ANI) September 14, 2019
ಅಮೆರಿಕಾ ಮಾಧ್ಯಮಗಳು ಕಳೆದ ಆಗಸ್ಟ್ ತಿಂಗಳ ಆರಂಭದಲ್ಲೇ ಹಂಝ ಬಿನ್ ಲ್ಯಾಡೆನ್ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ಬಿತ್ತರಿಸಿದ್ದವು. ಆದರೆ ಈ ಬಗ್ಗೆ ಟ್ರಂಪ್ ಹಾಗೂ ಅಮೆರಿಕಾದ ಉನ್ನತ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿರಲಿಲ್ಲ.
ಹಂಝ ಬಿನ್ ಲ್ಯಾಡೆನ್, ಒಸಾಮ ಬಿನ್ ಲ್ಯಾಡೆನ್ನ 20 ಮಕ್ಕಳಲ್ಲಿ 15ನೆಯವ. ಅಲ್ಲದೆ ಈತ ಒಸಾಮ ಬಿನ್ ಲ್ಯಾಡೆನ್ನ ಮೂರನೇ ಪತ್ನಿಯ ಮಗ. ಅಂದಾಜು ಈತನಿಗೆ 30 ವರ್ಷ ವಯಸ್ಸಾಗಿತ್ತು.