ETV Bharat / international

ಟ್ರಂಪ್​ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಟಿಕ್​ ಟಾಕ್​, ನೌಕರರ ಸಿದ್ಧತೆ

ಜನಪ್ರಿಯ ವಿಡಿಯೋ ಆ್ಯಪ್‌ಗಳಾದ ಟಿಕ್‌ಟಾಕ್ ಮತ್ತು ವಿಚಾಟ್ ಅನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ಟಿಕ್​ ಟಾಕ್ ಹಾಗೂ ​ಕಂಪನಿ ನೌಕರರು ಮುಂದಾಗಿದ್ದಾರೆ.

TikTok
ಟಿಕ್​ ಟಾಕ್
author img

By

Published : Aug 14, 2020, 5:53 PM IST

ವಾಷಿಂಗ್ಟನ್: ಟಿಕ್​ಟಾಕ್​ ಕಿರು ವಿಡಿಯೋ ಆ್ಯಪ್​ ರದ್ದು ಮಾಡಲು ಆದೇಶಿಸಿರುವ ಟ್ರಂಪ್​ ಅವರ ನಿರ್ಧಾರವನ್ನು ಕಂಪನಿ ಹಾಗೂ ನೌಕರರು ಕೋರ್ಟ್​ ಮುಂದಿಡಲು ನಿರ್ಧರಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಬೆದರಿಕೆ ಇದೆ ಎಂದು ಕಳೆದ ವಾರ ಚೀನಾದ ಜನಪ್ರಿಯ ವಿಡಿಯೋ ಆ್ಯಪ್‌ಗಳಾದ ಟಿಕ್‌ಟಾಕ್ ಮತ್ತು ವಿಚಾಟ್ ಅನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಟ್ರಂಪ್​ರ ಈ ಆದೇಶ ಅಸಂವಿಧಾನಿಕ ಎಂದು ಹೇಳಿರುವ ಟಿಕ್​ ಟಾಕ್ ಹಾಗೂ ಯುಸ್​ ನೌಕರರು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ನೌಕರರ ಪರ ವಕೀಲ ವಕೀಲ ಮೈಕ್ ಗಾಡ್ವಿನ್ ತಿಳಿಸಿದ್ದಾರೆ.

ಈ ಆದೇಶವು ಸೆಪ್ಟೆಂಬರ್​ನಿಂದ ಜಾರಿಗೆ ಬರಲಿದೆ. ಆದರೆ ಅಮೆರಿಕದ 100 ಮಿಲಿಯನ್​ಗೂ ಅಧಿಕ ಟಿಕ್‌ ಟಾಕ್ ಬಳಕೆದಾರರಿಗೆ ಟ್ರಂಪ್​ ಆದೇಶದ ಅರ್ಥವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟಿಕ್​ ಟಾಕ್​ ಸಂಪೂರ್ಣ ಬ್ಯಾನ್ ಆದರೆ ಅಮೆರಿಕದ 1500 ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ.

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮೊದಲು ಭಾರತ ಟಿಕ್​ ಟಾಕ್​ ಸೇರಿದಂತೆ 106 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ. ಭಾರತದ ನಡೆಯನ್ನು ಸ್ವಾಗತಿಸಿರುವ ಟ್ರಂಪ್​ ಸರ್ಕಾರ ಕೂಡ ಟಿಕ್‌ಟಾಕ್ ಮತ್ತು ವಿಚಾಟ್ ಅನ್ನು ನಿಷೇಧಿಸುವ ನಿರ್ಧಾರದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.