ಪ್ಯಾರೀಸ್ (ಫ್ರಾನ್ಸ್): ವ್ಯಕ್ತಿವೋರ್ವ ಚಾಕುವಿನಿಂದ ಹಲ್ಲೆ ನಡೆಸಿ, ಮೂವರನ್ನು ಕೊಂದು, ಹಲವರನ್ನು ಗಾಯಗೊಳಿಸಿರುವ ಘಟನೆ ಫ್ರಾನ್ಸ್ನ ಮೆಡಿಟರೇನಿಯನ್ ನಗರದಲ್ಲಿರುವ ಚರ್ಚ್ ಬಳಿ ನಡೆದಿದೆ. ದಾಳಿ ನಡೆಸಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತನಿಗೂ ಗಾಯಗಳಾಗಿವೆ. ಸದ್ಯಕ್ಕೆ ಸಮೀಪದ ಆಸ್ಪತ್ರೆಯಲ್ಲಿ ಆತನಿಗೆ ಹಾಗೂ ಹಲ್ಲೆಗೊಳಗಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದಾಳಿಯಿಂದಾಗಿ ಫ್ರಾನ್ಸ್ನಲ್ಲಿ ಭಯೋತ್ಪಾದಕರ ಭೀತಿ ಹೆಚ್ಚಾಗಿದ್ದು, ಪೊಲೀಸರು ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಇದನ್ನೂ ಓದಿ: ಇಸ್ಲಾಂ ಮೂಲಭೂತವಾದದ ವಿರುದ್ಧ ಫ್ರಾನ್ಸ್ಗೆ ಭಾರತ ಸಂಪೂರ್ಣ ಬೆಂಬಲ
ಇಂದು ಫ್ರಾನ್ಸ್ನ ಲೋಕಸಭೆಯಲ್ಲಿ ಕೊರೊನಾ ವೈರಸ್ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಈ ವೇಳೆ, ಹಲ್ಲೆಯಲ್ಲಿ ಮೃತಪಟ್ಟವರಿಗೂ ಕೆಲ ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು. ಮೇಯರ್ ಈ ಬಗ್ಗೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
-
Je suis sur place avec la @PoliceNat06 et la @pmdenice qui a interpellé l’auteur de l’attaque. Je confirme que tout laisse supposer à un attentat terroriste au sein de la basilique Notre-Dame de #Nice06. pic.twitter.com/VmpDqRwzB1
— Christian Estrosi (@cestrosi) October 29, 2020 " class="align-text-top noRightClick twitterSection" data="
">Je suis sur place avec la @PoliceNat06 et la @pmdenice qui a interpellé l’auteur de l’attaque. Je confirme que tout laisse supposer à un attentat terroriste au sein de la basilique Notre-Dame de #Nice06. pic.twitter.com/VmpDqRwzB1
— Christian Estrosi (@cestrosi) October 29, 2020Je suis sur place avec la @PoliceNat06 et la @pmdenice qui a interpellé l’auteur de l’attaque. Je confirme que tout laisse supposer à un attentat terroriste au sein de la basilique Notre-Dame de #Nice06. pic.twitter.com/VmpDqRwzB1
— Christian Estrosi (@cestrosi) October 29, 2020
ಪ್ರವಾದಿ ಮಹಮದ್ರ ಬಗ್ಗೆ ವ್ಯಂಗ್ಯ ಚಿತ್ರ ಪ್ರದರ್ಶಿಸಿ, ಪಾಠ ಮಾಡಿದ ಶಿಕ್ಷಕನ ಶಿರಚ್ಛೇದನದ ನಂತರ ಇಸ್ಲಾಂ ರಾಷ್ಟ್ರಗಳು ಹಾಗೂ ಫ್ರಾನ್ಸ್ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿದ್ದೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.