ETV Bharat / international

ಭೂಕಂಪಕ್ಕೆ ಹೈಟಿ ತತ್ತರ: ಒಂದು ತಿಂಗಳಾದರೂ ಲಕ್ಷಾಂತರ ಮಂದಿಗೆ ತಲುಪಿಲ್ಲ ನೆರವು! - earthquake

ಆಗಸ್ಟ್​ 14ರಂದು 7.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ತೀವ್ರತೆಗೆ ತುತ್ತಾಗಿರುವ ಲಕ್ಷಾಂತರ ಮಂದಿ ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಒಂದು ತಿಂಗಳಾದರೂ ಲಕ್ಷಾಂತರ ಮಂದಿಗೆ ಯಾವುದೇ ರೀತಿಯ ನೆರವು ತಲುಪಿಲ್ಲ.

Haiti quake
ಹೈಟಿ ಭೂಕಂಪ
author img

By

Published : Sep 17, 2021, 7:14 AM IST

ಸ್ಯಾನ್ ಜುವಾನ್ (ಪುಯೆರ್ಟೊರಿಕೊ): ಕೆರಿಬಿಯನ್‌ ಸಮುದ್ರ ತೀರದಲ್ಲಿರುವ ಪುಟ್ಟ ದೇಶ ಹೈಟಿಯಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಬಲ ಭೂಕಂಪಕ್ಕೆ ತುತ್ತಾದ ಲಕ್ಷಾಂತರ ಮಂದಿ ಇನ್ನೂ ನೆರವಿಗಾಗಿ ಕಾಯುತ್ತಿದ್ದಾರೆ. ಭೂಮಿ ಕಂಪಿಸಿ ಒಂದು ತಿಂಗಳಾದರೂ ಅದೆಷ್ಟೋ ಮಂದಿಗೆ ಇನ್ನೂ ಯಾವುದೇ ರೀತಿಯ ನೆರವು ತಲುಪಿಲ್ಲ.

ಆಗಸ್ಟ್​ 14ರಂದು 7.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ಪರಿಣಾಮಗಳನ್ನು ಈ ಪುಟ್ಟ ರಾಷ್ಟ್ರ ಎದುರಿಸುತ್ತಲೇ ಬಂದಿದೆ. ಈಗಲೂ ಸಾವು - ನೋವಿನ ಪ್ರಮಾಣ ಮುಂದುವರೆಯುತ್ತಲೇ ಇದೆ. ಭೂಕಂಪದ ತೀವ್ರತೆಗೆ ತುತ್ತಾಗಿರುವ ಲಕ್ಷಾಂತರ ಮಂದಿ ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಒಂದು ತಿಂಗಳಾದರೂ ಲಕ್ಷಾಂತರ ಮಂದಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ.

ಇದನ್ನೂ ಓದಿ: PM Modi's birthday: 71 ಅಡಿ ಉದ್ದದ 'ವ್ಯಾಕ್ಸಿನ್​ ಕೇಕ್​' ಕತ್ತರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಹೈಟಿಯ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಅಂದಾಜಿನ ಪ್ರಕಾರ, ಶೇ 46ರಷ್ಟು ಮಂದಿಗೆ ಮಾತ್ರ ನೆರವು ತಲುಪಿದೆ. ಕೆಲ ಸೂಕ್ಷ್ಮ ಪ್ರದೇಶ ಮತ್ತು ದೂರದ ಪ್ರದೇಶಗಳಿಗೆ ಯಾವುದೇ ರೀತಿಯ ಸಹಾಯ ತಲುಪಿಲ್ಲ. ಪ್ರಕೃತಿಯ ಮುನಿಸಿಗೆ 2,200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 1,37,500 ಕ್ಕೂ ಹೆಚ್ಚು ಮನೆಗಳು ಮತ್ತು ಸುಮಾರು 900 ಶಾಲೆಗಳು ಹಾನಿಗೀಡಾಗಿವೆ.

ವರದಿಗಳ ಪ್ರಕಾರ, ಸುಮಾರು 83,000 ಕುಟುಂಬಗಳು ಬಾಧಿತವಾಗಿವೆ. 25,900 ಜನರು ಮಾತ್ರ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.