ಲೂಯಿಸಿಯಾನ (ಯು.ಎಸ್): ಎಂಜಿನ್ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಲ್ಲಿನ ಹೈವೇಯಲ್ಲೇ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
ಹಾರಾಟದ ಸಮಯದಲ್ಲಿ ವಿಮಾನದ ಎಂಜಿನ್ನಲ್ಲಿ ದೋಷ ಕಂಡುಬಂದಿದೆ. ಇದನ್ನು ತಕ್ಷಣ ಅರಿತುಕೊಂಡ ಪೈಲಟ್ ಹೋವಿ ಗೈಡ್ರಿ ಹೈವೇಯಲ್ಲಿಯೇ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಲ್ಯಾಂಡಿಂಗ್ ಮಾಡುವ ಮುನ್ನ ಪೈಲಟ್ ಒಂದು ಗಂಟೆ ಕಾಲ ಹಾರಾಟ ನಡೆಸಿದ್ದರು. ಒಂದು ಗಂಟೆ ಹಾರಾಟದ ಬಳಿಕ ಹಾಗೂ ಅದು 2,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಇಂಜಿನ್ನಲ್ಲಿ ದೋಷ ಕಂಡು ಬಂದಿತ್ತು. ಇದನ್ನು ಅರಿತ ಪೈಲಟ್ ತಮ್ಮ ಜಾಣ್ಮೆಯಿಂದ ಹೈವೇ ಯಲ್ಲಿಯೇ ಸುರಕ್ಷಿತ ಲ್ಯಾಂಡಿಂಗ್ ಮಾಡಿ ಜೀವ ಉಳಿಸಿದ್ದಾರೆ.