ನ್ಯೂಯಾರ್ಕ್: ಅಮೆರಿಕದ ಖ್ಯಾತ ಸ್ಕೈ ಸರ್ಫರ್ ಕೀತ್ ಎಡ್ವರ್ಡ್ ಸ್ನೈಡರ್ 13,500 ಅಡಿ ಎತ್ತರದಲ್ಲಿ ಗಾಳಿಯಲ್ಲಿ 160 ಸುತ್ತುಗಳನ್ನು (ಸ್ಪಿನ್) ಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕಳೆದ ನವೆಂಬರ್ 1 ರಂದು ಈಜಿಪ್ಟ್ನ ಪಿರಮಿಡ್ ಮೇಲೆ 13,500 ಅಡಿ ಎತ್ತರದಿಂದ ಹೆಲಿಕಾಪ್ಟರ್ ಸಹಾಯ ಪಡೆದು ಅಲ್ಲಿಂದ ಹಾರಿ ಆಗಸದಲ್ಲಿಯೇ ಸ್ಕೈ ಸರ್ಫಿಂಗ್ ಮಾಡುವ ಜೊತೆಗೆ 160 ಸುತ್ತುಗಳನ್ನು ಹಾಕುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಎಡ್ವರ್ಡ್ ಸ್ನೈಡರ್ 5000 ಅಡಿ ಭೂಮಿಯಿಂದ ದೂರವಿರುವ ಹೊತ್ತಿಗಾಗಲೇ ಈ ವಿಶ್ವದಾಖಲೆ ಬರೆದು ಸಾಧನೆ ಮಾಡಿದ್ದಾರೆ.
ನವೆಂಬರ್ 1 ರಂದು ಕೀತ್ ಎಡ್ವರ್ಡ್ ಸ್ನೈಡರ್ ಗಿಜಾದ ಪಿರಮಿಡ್‌ಗಳ ಮೇಲಿಂದ ಹಾರುವ ಮೂಲಕ ಸ್ಕೈ ಸರ್ಪ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಎಡ್ವರ್ಡ್ ಸ್ನೈಡರ್ ಜಿಗಿತದ ವಿಡಿಯೋವನ್ನು ಪರಿಶೀಲಿಸಿದ ಬಳಿಕ ಈ ಸಾಧನೆಯನ್ನು ದೃಢೀಕರಿಸಲಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾದಿಂದ ದಕ್ಷಿಣ ಆಫ್ರಿಕಾ ಪ್ರವಾಸ.. ನಾಳೆ ಬಿಸಿಸಿಐನಿಂದ ಮಹತ್ವದ ನಿರ್ಧಾರ
ಎಡ್ವರ್ಡ್ ಸ್ನೈಡರ್ ಬಾಲಕನಾಗಿದ್ದಾಗ ಸ್ಕೈ ಸರ್ಫಿಂಗ್ನ ಚಾಂಪಿಯನ್ ಹ್ಯಾರಿಸ್ರ ಸಾಹಸಗಳಿಂದ ಸ್ಫೂರ್ತಿ ಪಡೆದುಕೊಂಡು ಇದೀಗ ತಾವು ಈ ಸಾಹಸವನ್ನು ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸ್ಕೈ ಸರ್ಫಿಂಗ್ನ ಚಾಂಪಿಯನ್ ರಾಬ್ ಹ್ಯಾರಿಸ್ ತಂಪು ಪಾನೀಯವಾದ ಮೌಂಟೇನ್ ಡ್ಯೂನ ಜಾಹೀರಾತಿನ ಚಿತ್ರೀಕರಣ ಸಾಹಸದ ವೇಳೆ ಸ್ಕೈಸರ್ಫಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದರು.