ಮುಂಬೈ: ವಿಶ್ವಾದ್ಯಂತ ಕರೋನಾ ವೈರಸ್‌ಗೆ ತುತ್ತಾದ ಮಕ್ಕಳನ್ನು ಉಳಿಸಲು ನಟಿ ಪ್ರಿಯಾಂಕಾ ಚೋಪ್ರಾ ಸ್ವೀಡಿಷ್ ಟೀನೇಜ್ ಆಕ್ಟಿವಿಸ್ಟ್ ಗ್ರೆಟಾ ಥನ್‌ಬರ್ಗ್ ಅವರೊಂದಿಗೆ ಕೈಜೋಡಿಸಿದ್ದಾರೆ.
ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ದೇಸಿ ಗರ್ಲ್ ಪ್ರಿಯಾಂಕಾ, ದುರ್ಬಲ ಮತ್ತು ಕೊರೊನಾ ವೈರಸ್ ಸೋಂಕಿನ ಅಪಾಯದಲ್ಲಿರುವ ಮಕ್ಕಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವದಾದ್ಯಂತ ದುರ್ಬಲ ಮಕ್ಕಳ ಮೇಲಿನ ಕೋವಿಡ್ -19 ರ ಪರಿಣಾಮವನ್ನು ನೋಡುವುದು ಹೃದಯ ವಿದ್ರಾವಕವಾಗಿದೆ. ಅವರು ಈಗ ಆಹಾರದ ಕೊರತೆ, ಒತ್ತಡದ ಆರೋಗ್ಯ ವ್ಯವಸ್ಥೆಗಳು, ಹಿಂಸೆ ಮತ್ತು ಕಳೆದುಹೋದ ಶಿಕ್ಷಣವನ್ನು ನಿಭಾಯಿಸಬೇಕಾಗಿದೆ. ನಾವು ಅವರನ್ನು ರಕ್ಷಿಸಬೇಕಾಗಿದೆ. ಅದರ ಜವಾಬ್ದಾರಿ ನಮ್ಮ ಮೇಲಿದೆ. ಈ ಅಭಿಯಾನಕ್ಕೆ ಸಹಾಯ ಮಾಡಲು@ ಯುನಿಸೆಫ್ ಮತ್ತು ರೆಗ್ರೇಟಾ ಥನ್‌ಬರ್ಗ್‌ಗೆ ಸೇರಿ ಎಂದು ನಟಿ ಟ್ವೀಟ್‌ನಲ್ಲಿ ಬರೆದಿದ್ದಾರೆ.
-
Join me in supporting this much needed campaign by @UNICEF & @GretaThunberg
— PRIYANKA (@priyankachopra) April 30, 2020 " class="align-text-top noRightClick twitterSection" data="
Donate here: https://t.co/d1BYjjRvqg
(2/2)
">Join me in supporting this much needed campaign by @UNICEF & @GretaThunberg
— PRIYANKA (@priyankachopra) April 30, 2020
Donate here: https://t.co/d1BYjjRvqg
(2/2)Join me in supporting this much needed campaign by @UNICEF & @GretaThunberg
— PRIYANKA (@priyankachopra) April 30, 2020
Donate here: https://t.co/d1BYjjRvqg
(2/2)
ಈ ಹಿಂದೆ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಪಿಎಂ - ಕೇರ್ಸ್ ಫಂಡ್, ಯುನಿಸೆಫ್, ಫೀಡಿಂಗ್ ಅಮೆರಿಕ ಮತ್ತು ಎಕೋ ಸೇರಿದಂತೆ ಹಲವಾರು ಕೊರೊನಾ ಪರಿಹಾರ ನಿಧಿಗೆ ಸಾಕಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.