ETV Bharat / international

ಅಧ್ಯಕ್ಷೀಯ ಚುನಾವಣೆ ಮುಂದೂಡಲು ಟ್ರಂಪ್ ಒಲವು.. ಆದರೆ ಇದು ಸಾಧ್ಯವೇ?

ಅಂಚೆ ಮತಗಳ ಚಲಾವಣೆ ಹೆಚ್ಚಾದರೆ ಚುನಾವಣಾ ಅಕ್ರಮಗಳು ಹೆಚ್ಚಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಿಂದೆ ಕೆಲವೇ ಕೆಲ ವಿರಳ ಪ್ರಕರಣಗಳಲ್ಲಿ ಅಂಚೆ ಮತಗಳ ಚಲಾವಣೆಯಲ್ಲಿ ಅಕ್ರಮಗಳು ನಡೆದಿದ್ದವು ಎನ್ನಲಾಗಿದೆ. ಆದರೆ ಇದರ ಮೂಲಕ ವ್ಯಾಪಕ ಅಕ್ರಮಗಳನ್ನು ನಡೆಸುವುದು ಸಾಧ್ಯವಿಲ್ಲ ಎನ್ನಲಾಗಿದೆ.

Postponement of USA Presidential Elections

author img

By

Published : Aug 1, 2020, 7:53 PM IST

ವಾಶಿಂಗ್ಟನ್; ಬರುವ ನವೆಂಬರ್​ನಲ್ಲಿ ನಡೆಯಬೇಕಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಬೇಕೆಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಕೊರೊನಾ ವೈರಸ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಂಚೆ ಮತಗಳ ಸಂಖ್ಯೆ ಹೆಚ್ಚಾಗುವುದರಿಂದ ಚುನಾವಣಾ ಅಕ್ರಮಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಚುನಾವಣೆಯನ್ನು ಮುಂದೂಡಬೇಕೆಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ, ವಿಪತ್ತು ಘೋಷಣೆ ಅಥವಾ ಮಿಲಿಟರಿ ಆಡಳಿತ ಹೀಗೆ ಯಾವುದೇ ಪರಿಸ್ಥಿತಿಗಳಲ್ಲೂ ಅಮೆರಿಕದ ಅಧ್ಯಕ್ಷರು ಏಕೈಕರಾಗಿ ಚುನಾವಣೆ ಮುಂದೂಡುವ ಅಥವಾ ರದ್ದು ಮಾಡುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಅಮೆರಿಕ ಸಂಸತ್ತು ಮಾತ್ರ ಚುನಾವಣೆಗಳ ದಿನಾಂಕ ಬದಲಾಯಿಸುವ ಅಧಿಕಾರ ಹೊಂದಿದೆ.

1845ರ ಹಳೆಯ ಕಾಯ್ದೆಯ ಪ್ರಕಾರ ಪ್ರತಿ ನಾಲ್ಕನೇ ವರ್ಷದ ನವೆಂಬರ್​ ತಿಂಗಳಿನ ಪ್ರಥಮ ಸೋಮವಾರದ ನಂತರ ಬರುವ ಮಂಗಳವಾರದಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತವೆ. ಅದರಂತೆ ಈ ಬಾರಿ 2020 ರ ನವೆಂಬರ್​ 3 ರಂದು ಚುನಾವಣೆ ನಡೆಯಬೇಕಿದೆ. ಇದನ್ನು ಬದಲಾಯಿಸಬೇಕಾದರೆ ಅಮೆರಿಕ ಸಂಸತ್ತಿನ ಕಾಂಗ್ರೆಸ್ ಹಾಗೂ ಸೆನೇಟ್​​ ಎರಡೂ ಸದನಗಳ ಒಪ್ಪಿಗೆ ಪಡೆಯಬೇಕಾಗುತ್ತದೆ. ಅಂದರೆ ಈ ಎರಡೂ ಸದನಗಳಲ್ಲಿ ಬಹುಮತದ ಮೂಲಕ ನಿರ್ಣಯವನ್ನು ಅಂಗೀಕರಿಸಬೇಕಾಗುತ್ತದೆ.

ಪ್ರಸ್ತುತ ಸೆನೇಟ್​ನಲ್ಲಿ ರಿಪಬ್ಲಿಕನ್ ಪಾರ್ಟಿ ಹಾಗೂ ಕಾಂಗ್ರೆಸ್​ನಲ್ಲಿ ಡೆಮೊಕ್ರಾಟ್​ ಪಾರ್ಟಿಗಳು ಬಹುಮತವನ್ನು ಹೊಂದಿವೆ. ಪರಿಸ್ಥಿತಿ ಹೀಗಿರುವಾಗ ಒಂದು ವಿಷಯದ ಮೇಲೆ ಎರಡೂ ಪಕ್ಷದ ಸದಸ್ಯರಲ್ಲಿ ಒಮ್ಮತ ಮೂಡಿಸುವುದು ಸಾಧ್ಯವೇ ಇಲ್ಲ ಎನ್ನಲಾಗಿದೆ.

ಪೋಸ್ಟಲ್ ಬ್ಯಾಲೆಟ್​; ಏನಿದು ವಿಷಯ?

2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಮೂರರಲ್ಲಿ ಒಂದರಷ್ಟು ಮತಗಳು ಅಂಚೆ ಮತಪತ್ರಗಳ (ಪೋಸ್ಟಲ್ ಬ್ಯಾಲೆಟ್​​) ಮೂಲಕ ಚಲಾವಣೆಯಾಗಿದ್ದವು. ಅಂಚೆ ಮತಗಳ ಸಂಖ್ಯೆ ಈ ಬಾರಿ ಮತ್ತೂ ಹೆಚ್ಚಾಗಬಹುದು ಎನ್ನಲಾಗಿದೆ. ಕೊರೊನಾ ವೈರಸ್​ ಬಿಕ್ಕಟ್ಟಿನ ಕಾರಣದಿಂದ ಚುನಾವಣಾ ಮತಗಟ್ಟೆಗಳ ಬಳಿ ಜನಜಂಗುಳಿಯಲ್ಲಿ ನಿಂತು ಮತ ಚಲಾಯಿಸಲು ಯಾರೂ ಇಷ್ಟ ಪಡುತ್ತಿಲ್ಲ. ಹೀಗಾಗಿ ಎಲ್ಲರೂ ಅಂಚೆ ಮತದ ಮೂಲಕವೇ ಮತ ಚಲಾಯಿಸಲು ಬಯಸುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.