ETV Bharat / international

ಕೆಲಸದಿಂದ ವಜಾ: 500 ಕೊರೊನಾ ಲಸಿಕೆ ಡೋಸ್​ ನಾಶ ಮಾಡಿದ ಫಾರ್ಮಸಿಸ್ಟ್​! - ಅಮೆರಿಕದಲ್ಲಿ ಲಸಿಕೆ ನಾಶ

ವಿಸ್‌ನ ಗ್ರಾಫ್ಟನ್‌ನಲ್ಲಿರುವ ಅರೋರಾ ಮೆಡಿಕಲ್ ಸೆಂಟರ್‌ನಲ್ಲಿ ನಡೆದ ಆಪಾದಿತನ ಅಧಿಕಪ್ರಸಂಗವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ.

Vaccine
ಲಸಿಕೆ
author img

By

Published : Jan 1, 2021, 3:57 PM IST

ವಾಷಿಂಗ್ಟನ್​: ಮಿಲ್ವಾಕಿಯ ಹೊರಗಿನ ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಡೋಸ್ ಕೊರೊನಾ ವೈರಸ್ ಲಸಿಕೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿದ ಆರೋಪದಡಿ ಔಷಧಿಕಾರನನ್ನು ಬಂಧಿಸಲಾಗಿದೆ.

ಅಜಾಗರೂಕತೆಯಿಂದ ಸುರಕ್ಷತೆಗೆ ಅಪಾಯವನ್ನು ಉಂಟುಮಾಡುವುದು, ಶಿಫಾರಸು ಮಾಡಿದ ಔಷಧ ಕಲಬೆರಕೆ ಮತ್ತು ಆಸ್ತಿ ಹಾನಿಯಂತಹ ಕ್ರಿಮಿನಲ್ ಆರೋಪದಡಿ ಆರೋಪಿಯನ್ನು ವಿಸ್‌ನ ಗ್ರಾಫ್ಟನ್‌ನ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

ವಿಸ್‌ನ ಗ್ರಾಫ್ಟನ್‌ನಲ್ಲಿರುವ ಅರೋರಾ ಮೆಡಿಕಲ್ ಸೆಂಟರ್‌ನಲ್ಲಿ ನಡೆದ ಆಪಾದಿತನ ಅಧಿಕ ಪ್ರಸಂಗವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಕೊರೊನಾ ವೈರಸ್​ ಸೋಂಕಿನ ಅಪಾಯದಿಂದ ಸೀಮಿತವಾಗಿ ಲಸಿಕೆ ನೀಡಲಾಗುತ್ತಿದೆ. ಇದರ ಮಧ್ಯೆ ಈ ಔಷಧಿಕಾರ ಲಸಿಕೆಗಳನ್ನು ನಾಶಪಡಿಸಿದ್ದಾನೆ. ಡೋಸೇಜ್‌ಗಳ ಅಂದಾಜು ಮೌಲ್ಯವು ಒಟ್ಟು 11,000 ಡಾಲರ್​ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಓದಿ: ಅಬ್ಬಾ!! ತನ್ನ ಲವರ್ ಗಪ್​-ಚುಪ್​​ ಭೇಟಿಗಾಗಿ ಸುರಂಗ ಮಾರ್ಗವನ್ನೇ ಕೊರೆದ ಭೂಪ!

ಅರೋರಾ ಹೆಲ್ತ್ ಕೇರ್ ಆರೋಗ್ಯ ರಕ್ಷಣೆಯು ಔಷಧಿಕಾರನನ್ನು ಈ ವಾರದ ಆರಂಭದಲ್ಲಿ ಸೇವೆಯಿಂದ ವಜಾಗೊಳಿಸಿತು. 57 ಲಸಿಕೆ ಬಾಟಲಿಗಳನ್ನು ಒಡೆದು ಹಾಕಿದ್ದಾಗಿ ಅಧಿಕಾರಿಗಳ ಮುಂದೆ ಲಿಖಿತವಾಗಿ ಒಪ್ಪಿಕೊಂಡಿದ್ದಾನೆ. ಸರಿಯಾಗಿ ಸಂಗ್ರಹಿಸದಿದ್ದರೆ ಲಸಿಕೆ ನಿಷ್ಪರಿಣಾಮಕಾರಿಯಾಗುತ್ತದೆ ಎಂಬುದು ಆತನಿಗೆ ತಿಳಿದಿತ್ತು. ಆರೋಪಿಯ ಬಗ್ಗೆ ಔಪಚಾರಿಕ ಪ್ರಕ್ರಿಯೆ ಮುಗಿಯುವವರೆಗೂ ಆ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.