ಮೋರ್ಹೆಡ್ ಸಿಟಿ(ಅಮೆರಿಕ): ಸುಮಾರು 8 ಮಂದಿಯಿದ್ದ ಸಣ್ಣ ವಿಮಾನವೊಂದು ಪತನವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ, ವಿಮಾನ ಸಿಬ್ಬಂದಿ ಸೇರಿ ಏಳು ಮಂದಿ ಕಾಣೆಯಾಗಿದ್ದಾರೆ. ಈ ಘಟನೆ ಭಾನುವಾರ ಉತ್ತರ ಕೆರೊಲಿನಾದಲ್ಲಿ ಕಾರ್ಟೆರೆಟ್ ಕೌಂಟಿಯ ಬಳಿಯಿರುವ ಸಮುದ್ರದ ಕರಾವಳಿಯಲ್ಲಿ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಅಮೆರಿಕದ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕರಾವಳಿಯಿಂದ ಸಮುದ್ರದೆಡೆಗೆ ಸುಮಾರು ನಾಲ್ಕು ಮೈಲುಗಳಷ್ಟು ದೂರದಲ್ಲಿ ನೀರಿನಲ್ಲಿ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Eight duck-hunters, including 4 teens, feared dead in NC plane crash https://t.co/nbtl0FcIxz pic.twitter.com/v8DAtdh6xX
— New York Post (@nypost) February 14, 2022 " class="align-text-top noRightClick twitterSection" data="
">Eight duck-hunters, including 4 teens, feared dead in NC plane crash https://t.co/nbtl0FcIxz pic.twitter.com/v8DAtdh6xX
— New York Post (@nypost) February 14, 2022Eight duck-hunters, including 4 teens, feared dead in NC plane crash https://t.co/nbtl0FcIxz pic.twitter.com/v8DAtdh6xX
— New York Post (@nypost) February 14, 2022
ವಿಮಾನದಲ್ಲಿ ನಾಲ್ವರು ಹದಿಹರೆಯದವರು ಇದ್ದರೆಂದು ಹೇಳಲಾಗುತ್ತಿದೆ. ವಿಮಾನ ದುರಂತಕ್ಕೀಡಾಗುವ ಮೊದಲು ರಾಡಾರ್ ನಿಯಂತ್ರಣದಿಂದ ತಪ್ಪಿಸಿಕೊಂಡಿತ್ತು ಎಂದು ಸ್ಥಳೀಯ ವಾಹಿನಿಯಾದ WCTI-TV ವರದಿ ಮಾಡಿದೆ.
ಇದನ್ನೂ ಓದಿ: ಟ್ರಕ್ ಚಾಲಕರ ಭಾರಿ ಪ್ರತಿಭಟನೆ: 50 ವರ್ಷದಲ್ಲೇ ಮೊದಲ ಬಾರಿಗೆ ತುರ್ತು ಅಧಿಕಾರ ಬಳಸಿದ ಕೆನಡಾ ಪ್ರಧಾನಿ
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲಿದೆ.