ವಾಷಿಂಗ್ಟನ್: ಒಂದು ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗುತ್ತಿದ್ದಂತೆ ಪಾಕಿಸ್ತಾನ ಆ ಪ್ರದೇಶದಲ್ಲಿ 70 ವರ್ಷಗಳಿಂದ ಮಾಡಿದ ಎಲ್ಲಾ ಕುತಂತ್ರ ಯೋಜನೆಗಳು ಕೊನೆಗೊಳ್ಳಲಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
-
Everything Pak planned for Kashmir in 70 years comes to naught once region is developed: Jaishankar
— ANI Digital (@ani_digital) October 1, 2019 " class="align-text-top noRightClick twitterSection" data="
Read @ANI story | https://t.co/zXFVoPsqFF pic.twitter.com/wKcMfp7sHG
">Everything Pak planned for Kashmir in 70 years comes to naught once region is developed: Jaishankar
— ANI Digital (@ani_digital) October 1, 2019
Read @ANI story | https://t.co/zXFVoPsqFF pic.twitter.com/wKcMfp7sHGEverything Pak planned for Kashmir in 70 years comes to naught once region is developed: Jaishankar
— ANI Digital (@ani_digital) October 1, 2019
Read @ANI story | https://t.co/zXFVoPsqFF pic.twitter.com/wKcMfp7sHG
ವಾಷಿಂಗ್ಟನ್ನಲ್ಲಿ ಮಾತನಾಡಿದ ಅವರು, ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನ ತಡೆಗಟ್ಟಲಾಗುತ್ತಿದೆ. ಇದರಿಂದ ಭಾರತ ವಿರೋಧಿ ಚಟುವಟಿಕೆ ಕಡಿಮೆಯಾಗಿದೆ ಎಂದಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಜನ ಬಹಳಷ್ಟು ಕಷ್ಟಗಳನ್ನ ಅನುಭವಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರವನ್ನ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಲಾಗುತ್ತದೆ, ಆ ದಿನ ದೂರವಿಲ್ಲ. ಅಭಿವೃದ್ಧಿ ಪ್ರಾರಂಭವಾಗುತ್ತಿದ್ದಂತೆ ಪಕ್ ಆಕ್ರಮಿತ ಕಾಶ್ಮೀರದ ಜನರೇ ಭಾರತದತ್ತ ಮುಖ ಮಾಡಲಿದ್ದಾರೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.