ETV Bharat / international

ಕೊರೊನಾ ಭೀತಿ: ತೈಲ ಮತ್ತು ಅನಿಲ​ ಸಮ್ಮೇಳನ ಮುಂದೂಡಿಕೆ - ಹೂಸ್ಟನ್

ಭಾರತ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಈ ಸಮ್ಮೇಳನಕ್ಕೆ ಜನರು ಆಗಮಿಸುತ್ತಿದ್ದರು. ಕೊರೊನಾ ಭಯದಿಂದ ಈ ಸಮ್ಮೇಳನವನ್ನು ಮುಂದೂಡಲಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ದಿನಾಂಕವನ್ನು ನಿಗಧಿ ಮಾಡಲಾಗುತ್ತದೆ ಎಂದು ಸಮ್ಮೇಳನದ ಆಯೋಜನರು ತಿಳಿಸಿದ್ದಾರೆ.

Oil and gas conference in US postponed over coronavirus pandemic
ತೈಲ ಮತ್ತು ಗ್ಯಾಸ್​ ಸಮ್ಮೇಳನ ಮುಂದೂಡಿಕೆ
author img

By

Published : Mar 16, 2020, 2:48 PM IST

ಹ್ಯೂಸ್ಟನ್​: ಕೊರೊನಾ ವೈರಸ್​ ಹಿನ್ನೆಲೆ ವಿಶ್ವದ ಅತಿದೊಡ್ಡ ತೈಲ ಮತ್ತು ಅನಿಲ​ ಸಮ್ಮೇಳನವನ್ನು ಮುಂದೂಡಲಾಗಿದೆ.

ಭಾರತ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಈ ಸಮ್ಮೇಳನಕ್ಕೆ ಜನರು ಆಗಮಿಸುತ್ತಿದ್ದರು. ಕೊರೊನಾ ಭಯದಿಂದ ಈ ಸಮ್ಮೇಳನವನ್ನು ಮುಂದೂಡಲಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ದಿನಾಂಕವನ್ನು ನಿಗಧಿ ಮಾಡಲಾಗುತ್ತದೆ ಎಂದು ಸಮ್ಮೇಳನದ ಆಯೋಜನರು ತಿಳಿಸಿದ್ದಾರೆ.

ನಾವು ಈ ಸಮ್ಮೇಳನವನ್ನು ರದ್ದುಗೊಳಿಸುವ ಬದಲು ಮುಂದೂಡಿದ್ದೇವೆ. ಆದರೆ ಈ ನಿರ್ಧಾರದಿಂದ ಆರ್ಥಿಕತೆಯ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನಡೆದ ಈ ಸಮ್ಮೇಳನದಲ್ಲಿ ಸುಮಾರು 60 ಸಾವಿರ ಮಂದಿ ಭಾಗಿಯಾಗಿದ್ದರು.

ಇನ್ನು, ನಮ್ಮ ಪಾಲುದಾರರು, ಸಮ್ಮೇಳನಕ್ಕೆ ಆಗಮಿಸುವವರು, ಪ್ರದರ್ಶಕರು, ಸಿಬ್ಬಂದಿ ಮತ್ತು ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಯು ಪ್ರಮುಖವಾದ್ದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಅಯೋಜಕರು ತಿಳಿಸಿದ್ದಾರೆ.

ಮುಂದೆ ನಿಗಧಿಯಾಗುವ ದಿನಾಂಕದಲ್ಲಿ ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಲೇಖಕರು, ಭಾಷಣಕಾರರು, ಪ್ರದರ್ಶಕರು ಮತ್ತು ಪಾಲುದಾರರೊಂದಿಗೆ ಪರಸ್ಪರ ಸಂವಹನ ನಡೆಯಲಿದೆ. ಈ ಸಮ್ಮೇಳನವು ಇಂಧನ ಉದ್ಯಮದ ವೃತ್ತಿಪರರಿಗೆ ನೂತನ ಯೋಜನೆಗಳನ್ನು ಪರಿಚಯಿಸಲು ಹಾಗೂ ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಎಂದು ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.