ETV Bharat / international

ಬ್ರಿಟನ್‌, ಚೀನಾಗಿಂತಲೂ ನ್ಯೂಯಾರ್ಕ್​​ನಲ್ಲಿ ಹೆಚ್ಚು ಕೋವಿಡ್ ಸೋಂಕು, ಸಾವು - ನ್ಯೂಯಾರ್ಕ್​ ಸಿಟಿ

ಪ್ರಪಂಚದಾದ್ಯಂತ 1.8 ಮಿಲಿಯನ್​ ಜನರಲ್ಲಿ ಅಂದ್ರೆ 18 ಲಕ್ಷ ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಇಲ್ಲಿಯವರೆಗೆ 1,14,185 ಜನರು ಸೋಂಕಿನಿಂದ ಹೋರಾಡಿ ಉಸಿರು ನಿಲ್ಲಿಸಿದ್ದಾರೆ. ಆಘಾತಕಾರಿ ವಿಚಾರ ಏನಪ್ಪಾ ಅಂದ್ರೆ, ಅಮೆರಿಕದ ನ್ಯೂಯಾರ್ಕ್​ ನಗರದಲ್ಲಿ 1,89,000 ಪ್ರಕರಣಗಳು ಪತ್ತೆಯಾಗಿದ್ದು 9,385 ಜನರು ಸಾವನ್ನಪ್ಪಿದ್ದಾರೆ.

COVID19 cases
COVID19 cases
author img

By

Published : Apr 13, 2020, 12:33 PM IST

ನ್ಯೂಯಾರ್ಕ್​: ಚೀನಾದಲ್ಲಿ ಹುಟ್ಟಿಕೊಂಡು ವಿಶ್ವದೆಲ್ಲೆಡೆ ಹಬ್ಬಿರುವ ಹೆಮ್ಮಾರಿ ಕೊರೊನಾ ಅನೇಕ ದೇಶಗಳಲ್ಲಿ ಮಾರಣಹೋಮವನ್ನೇ ನಡೆಸಿದೆ. ಅದ್ರಲ್ಲೂ ಪ್ರಮುಖವಾಗಿ ವೈರಾಣು ತಂದಿಟ್ಟ ಅವಾಂತರಕ್ಕೆ ದೊಡ್ಡಣ್ಣನ ಜಂಘಾಬಲವೇ ಉಡುಗಿದೆ.

ಇಲ್ಲಿಯವರೆಗೆ ಇಂಗ್ಲೆಂಡ್​ನಲ್ಲಿ 83,135, ಚೀನಾದಲ್ಲಿ 71,185, ಹಾಗೂ ಇರಾನ್​​ನಲ್ಲಿ 71,686 ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಅಮೆರಿಕದಲ್ಲಿ 5,57,300 ಪ್ರಕರಣ ಕಾಣಿಸಿಕೊಂಡಿವೆ.

ಪ್ರಪಂಚದಾದ್ಯಂತ 1.8 ಮಿಲಿಯನ್​ ಜನರಲ್ಲಿ ಅಂದ್ರೆ 18 ಲಕ್ಷ ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಇಲ್ಲಿಯವರೆಗೆ 1,14,185 ಜನರು ಸೋಂಕಿನಿಂದ ಹೋರಾಡಿ ಉಸಿರು ನಿಲ್ಲಿಸಿದ್ದಾರೆ. ಆಘಾತಕಾರಿ ವಿಚಾರ ಏನಪ್ಪಾ ಅಂದ್ರೆ, ಅಮೆರಿಕದ ನ್ಯೂಯಾರ್ಕ್​ ನಗರದಲ್ಲಿ 1,89,000 ಪ್ರಕರಣಗಳು ಪತ್ತೆಯಾಗಿದ್ದು 9,385 ಜನರು ಸಾವನ್ನಪ್ಪಿದ್ದಾರೆ.

ನ್ಯೂಯಾರ್ಕ್​ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಜನರು ಸಾವನ್ನಪ್ಪುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಇದರಿಂದ ಅರಿವಾಗುತ್ತಿದೆ.

ಇನ್ನು ಇಟಲಿ ಮತ್ತು ಸ್ಪೇನ್‌ನಲ್ಲಿ ವೈರಸ್ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಬ್ರಿಟನ್‌ ಮತ್ತು ಯುರೋಪ್‌ನಲ್ಲಿ ಹೆಚ್ಚು ವೈರಸ್ ಸಾವುನೋವು ಸಂಭವಿಸುತ್ತಿರುವುದು ತಲ್ಲಣ ಸೃಷ್ಟಿಸಿದೆ.

ನ್ಯೂಯಾರ್ಕ್​ ಭಾರಿ ಸಂಕಷ್ಟಕ್ಕೊಳಗಾಗಿರುವ ಕಾರಣ ಜನರು, ವೈದ್ಯರು ಹಾಗೂ ಸ್ವಯಂಸೇವಕರು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿನ ವೈದ್ಯರು ದಿನಪೂರ್ತಿ ಚಿಕಿತ್ಸೆಯಲ್ಲಿಯೇ ತೊಡಗಿದ್ದಾರೆ. ಇದರ ಹೊರತಾಗಿಯೂ ಕೂಡ ಮಹಾಮಾರಿಯ ಆರ್ಭಟ ನಿಲ್ಲುತ್ತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.