ಹ್ಯಾಮಿಲ್ಟ್ನ್(ಕೆನಡಾ): ದೇಹದಲ್ಲಿ ಉಂಟಾಗುವ ರೋಗಗ್ರಸ್ತ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ವಿನೂತನವಾದ ಆ್ಯಂಟಿಬಯೋಟಿಕ್ ಒಂದನ್ನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತಿದ್ದು, ಅತೀ ಸೂಕ್ಷ್ಮವಾದ ಬ್ಯಾಕ್ಟೀರಿಯಗಳ ಉತ್ಪತ್ತಿ ಜಾಸ್ತಿಯಾಗುತ್ತಿದೆ. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಹಾಗೂ ರೋಗನಿಯಂತ್ರಣ ಶಕ್ತಿ ಉದ್ದೇಶದಿಂದ ಕಾರ್ಬೊಮೈಸಿನ್ ಆ್ಯಂಟಿಬಯೋಟಿಕ್ ಔಷಧವನ್ನ ಕಂಡು ಹಿಡಿಯಲಾಗಿದೆ ಎಂದು ಕೆನಡಾ ವಿಜ್ಞಾನಿಗಳು ತಿಳಿಸಿದ್ದಾರೆ.
ಬ್ಯಾಕ್ಟೀರಿಯಾ ಹೊಡೆದೋಡಿಸುವ ದೇಹದ ನಿರೋಧಕದ ಕೊರತೆಯಿಂದಾಗಿ ಪ್ರತಿವರ್ಷ ವಿಶ್ವದಾದ್ಯಂತ 7ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಹಿನ್ನೆಲೆ, ಕೆನಡಾ ವಿಜ್ಞಾನಿಗಳು ಕಾರ್ಬೊಮೈಸಿನ್ ಎಂಬ ಆ್ಯಂಟಿಬಯೋಟಿಕ್ ಕಂಡು ಹಿಡಿದಿದ್ದು, ದೇಹದಲ್ಲಿರುವ ಪ್ರತಿಜೀವಕದ ನೀರೋಧ ಶಕ್ತಿಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ದೇಹದಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆ ವೇಳೆ ಅವುಗಳ ತಮ್ಮ ಸುತ್ತ ಲೇಯರ್ಗಳನ್ನು ಸೃಷ್ಟಿಸಿಕೊಂಡು ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟವು ಉದ್ದೇಶದಿಂದ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಪೆನ್ಸಿಲಿನ್ ಆ್ಯಂಟಿಬಯೋಟಿಕ್ ಔಷಧ ಬಳಸಲಾಗುತ್ತದೆ.
ಈ ಪೆನ್ಸಿಲಿನ್ ಆ್ಯಂಟಿಬಯೋಟಿಕ್ನಿಂದಾಗಿ ಬ್ಯಾಕ್ಟೀರಿಯ ಸೃಷ್ಠಿಸಿರುವ ಲೇಯರ್ಗಳನ್ನು ಸಾಯಿಸಲು ಸಾಧ್ಯವೆ ಹೊರತು ಬ್ಯಾಕ್ಟೀರಿಯಾಗಳು ಸಾಯುವುದಿಲ್ಲ ಎಂದು ಹ್ಯಾಮಿಲ್ಟನ್‌ನ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ಸಂಶೋಧಕ ಬೆಥ್ ಕಲ್ಪ್ ತಿಳಿಸಿದ್ದಾರೆ.
ಇನ್ನು ಬೆಥ್ ಕಲ್ಪ್ ಕಾರ್ಬೊಮೈಸಿನ್ ಆ್ಯಂಟಿಬಯೋಟಿಕ್ಬಗ್ಗೆ ಮಾಹಿತಿ ನೀಡಿದ್ದು, ಇದೊಂದು ವಿಶಿಷ್ಠವಾದ ಆ್ಯಂಟಿಬಯೋಟಿಕ್ ಆಗಿದ್ದು, ಇದರಿಂದಾಗಿ ಬ್ಯಾಕ್ಟೀರಿಯಾ ತನ್ನ ಸುತ್ತ ನಿರ್ಮಿಸಿಕೊಂಡ ಲೇಯರ್ಗಳನ್ನು ಗಟ್ಟಿಗೊಳಿಸಿ ಬ್ಯಾಕ್ಟೀರಿಯಾ ಬೆಳವಣಿಗೆಗಳನ್ನ ತಡೆಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ.