ETV Bharat / international

''ವಿಕ್ರಮ'ನ ಪತ್ತೆ ನಮ್ಮಿಂದ ಸಾಧ್ಯವಾಗಿಲ್ಲ'..! ನಾಸಾ ಅಧಿಕೃತ ಹೇಳಿಕೆ - Chandrayan 2

ವಾರದ ಹಿಂದೆಯೇ ವಿಕ್ರಮ್ ಲ್ಯಾಂಡರ್ ಇದೆ ಎನ್ನಲಾದ ಸ್ಥಳದ ಸಮೀಪದಲ್ಲೇ ನಾಸಾ ಆರ್ಬಿಟರ್ ಹಾದುಹೋಗಿತ್ತು. ಈ ಸಂದರ್ಭದಲ್ಲಿ ಆರ್ಬಿಟರ್ ಒಂದಷ್ಟು ಚಿತ್ರಗಳನ್ನು ತೆಗೆದಿತ್ತು. ಸದ್ಯ ಈ ಚಿತ್ರಗಳನ್ನು ಸಂಪೂರ್ಣವಾಗಿ ಪರಾಮರ್ಶಿಸಿರುವ ನಾಸಾ ಅಧಿಕೃತವಾಗಿ ಆ ಫೋಟೋಗಳನ್ನು ರಿಲೀಸ್ ಮಾಡಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ನಾಸಾ
author img

By

Published : Sep 27, 2019, 9:37 AM IST

ವಾಷಿಂಗ್ಟನ್: ಚಂದ್ರಯಾನ-2ರ ಮಹತ್ವದ ಘಟ್ಟ ಸಾಫ್ಟ್ ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಶತಪ್ರಯತ್ನ ನಡೆಸಿದ್ದ ಇಸ್ರೋ ಕೊನೆಗೆ ಲ್ಯಾಂಡರ್ ಸನಿಹದಲ್ಲೇ ಸಾಗುತ್ತಿರುವ ನಾಸಾದ ಆರ್ಬಿಟರ್ ಮೊರೆ ಹೋಗಿತ್ತು. ನಾಸಾ ಆರ್ಬಿಟರ್ ಮೂಲಕ ಲ್ಯಾಂಡರ್ ವಾಸ್ತವ ಸ್ಥಿತಿ ಪತ್ತೆಗೆ ಮಂದಾಗಿತ್ತು.

ಆರ್ಬಿಟರ್​ ಉತ್ತಮವಾಗಿ ಕೆಲಸ ಮಾಡ್ತಿದ್ದು, ಲ್ಯಾಂಡರ್​ ಸಿಗ್ನಲ್​ ಬಗ್ಗೆ ಗೊತ್ತಿಲ್ಲ: ಕೆ ಸಿವನ್​​

ವಾರದ ಹಿಂದೆಯೇ ನಾಸಾ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇದೆ ಎನ್ನಲಾದ ಸ್ಥಳದ ಸಮೀಪದಲ್ಲೇ ನಾಸಾ ಆರ್ಬಿಟರ್ ಹಾದು ಹೋಗಿತ್ತು. ಈ ಸಂದರ್ಭದಲ್ಲಿ ಆರ್ಬಿಟರ್ ಒಂದಷ್ಟು ಚಿತ್ರಗಳನ್ನು ತೆಗೆದಿತ್ತು. ಸದ್ಯ ಈ ಚಿತ್ರಗಳನ್ನು ಸಂಪೂರ್ಣವಾಗಿ ಪರಾಮರ್ಶಿಸಿರುವ ನಾಸಾ ಅಧಿಕೃತವಾಗಿ ಆ ಫೋಟೋಗಳನ್ನು ರಿಲೀಸ್ ಮಾಡಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇಸ್ರೋ ಈಗಾಗಲೇ ಹೇಳಿದಂತೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿಲ್ಲ ಎನ್ನುವುದನ್ನು ನಾಸಾ ಹೇಳಿದೆ. ಇಸ್ರೋ ಉದ್ದೇಶಿತ ಜಾಗದಲ್ಲೇ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಬದಲು ಹಾರ್ಡ್​ ಲ್ಯಾಂಡ್ ಆಗಿದೆ ಎಂದಿದ್ದು, ಆ ಜಾಗವನ್ನು ಇನ್ನಷ್ಟೇ ಪತ್ತೆಮಾಡಬೇಕಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಬಿಡುಗಡೆ ಮಾಡಿರುವ ಫೋಟೋಗಳು ಸಂಜೆಯ ವೇಳೆಯದ್ದಾಗಿದ್ದು, ಆರ್ಬಿಟರ್​ಗೆ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಇದೇ ನಾಸಾ ಆರ್ಬಿಟರ್ ಲ್ಯಾಂಡರ್ ಸಮೀಪದಲ್ಲೇ ಹಾದುಹೋಗಲಿದ್ದು ಈ ವೇಳೆ ಲ್ಯಾಂಡರ್ ಪತ್ತೆ ಮಾಡುವ ಆಶಾವಾದವನ್ನು ನಾಸಾ ವ್ಯಕ್ತಪಡಿಸಿದೆ.

ಸಂಪರ್ಕಕ್ಕೆ ಬರಲೇ ಇಲ್ಲ ಲ್ಯಾಂಡರ್... 'ವಿಕ್ರಮ'ನೊಂದಿಗೆ ಶಾಶ್ವತ ನಿದ್ರೆಗೆ ಜಾರಿದ 'ಪ್ರಜ್ಞಾನ್'

ಈಗಾಗಲೇ ಲ್ಯಾಂಡರ್ ಹಾಗೂ ರೋವರ್ ಕಾರ್ಯಾವಧಿ ಮುಕ್ತಾಯವಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಕಳೆದ ಶನಿವಾರವೇ ಕತ್ತಲು ಆವರಿಸಿದೆ. ರಾತ್ರಿಯ ವೇಳೆ ಚಂದ್ರನಲ್ಲಿ ಉಷ್ಣಾಂಶ -200 ಡಿಗ್ರಿ ದಾಟಲಿದ್ದು, ಈ ವೇಳೆ ಲ್ಯಾಂಡರ್ ಹಾಗೂ ರೋವರ್ ಸಂಪೂರ್ಣ ನಿಷ್ಕ್ರಿಯಗೊಳ್ಳಲಿದೆ ಎಂದು ಇಸ್ರೋ ಈ ಮೊದಲೇ ಹೇಳಿತ್ತು.

Intro:Body:

ವಾಷಿಂಗ್ಟನ್: ಚಂದ್ರಯಾನ -2ರ ಮಹತ್ವದ ಘಟ್ಟ ಸಾಫ್ಟ್ ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಶತಪ್ರಯತ್ನ ನಡೆಸಿದ್ದ ಇಸ್ರೋ ಕೊನೆಗೆ ಲ್ಯಾಂಡರ್ ಸನಿಹದಲ್ಲೇ ಸುತ್ತುತ್ತಿದ್ದ ನಾಸಾದ ಆರ್ಬಿಟರ್ ಮೊರೆ ಹೋಗಿತ್ತು. ನಾಸಾ ಆರ್ಬಿಟರ್ ಮೂಲಕ ಲ್ಯಾಂಡರ್ ವಾಸ್ತವ ಸ್ಥಿತಿ ಪತ್ತೆಗೆ ಮಂದಾಗಿತ್ತು.

ವಾರದ ಹಿಂದೆಯೇ ನಾಸಾ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಇದೆ ಎನ್ನಲಾದ ಸ್ಥಳದ ಸಮೀಪದಲ್ಲೇ ನಾಸಾ ಆರ್ಬಿಟರ್ ಹಾದುಹೋಗಿತ್ತು. ಈ ಸಂದರ್ಭದಲ್ಲಿ ಆರ್ಬಿಟರ್ ಒಂದಷ್ಟು ಚಿತ್ರಗಳನ್ನು ತೆಗೆದಿತ್ತು. ಸದ್ಯ ಈ ಚಿತ್ರಗಳನ್ನು ಸಂಪೂರ್ಣವಾಗಿ ಪರಾಮರ್ಶಿಸಿರುವ ನಾಸಾ ಅಧಿಕೃತವಾಗಿ ಆ ಫೋಟೋಗಳನ್ನು ರಿಲೀಸ್ ಮಾಡಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇಸ್ರೋ ಈಗಾಗಲೇ ಹೇಳಿದಂತೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿಲ್ಲ ಎನ್ನುವುದನ್ನು ನಾಸಾ ಹೇಳಿದೆ. ಇಸ್ರೋ ಉದ್ದೇಶಿತ ಜಾಗದಲ್ಲೇ ವಿಕ್ರಮ್ ಲ್ಯಾಂಡರ್ ಇಳಿದಿದೆ ಎಂದಿರುವ ನಾಸಾ ಆದರೆ ಲ್ಯಾಂಡರ್ ಹಾರ್ಡ್​ ಲ್ಯಾಂಡಿಂಗ್ ಆಗಿದೆ ಎನ್ನುವುದನ್ನು ನಿರ್ಧರಿಸಬೇಕಿದೆ ಎಂದಿದೆ.

ಸದ್ಯ ಬಿಡುಗಡೆ ಮಾಡಿರುವ ಫೋಟೋಗಳು ಸಂಜೆಯ ವೇಳೆಯದ್ದಾಗಿದ್ದು, ಆರ್ಬಿಟರ್​ಗೆ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಇದೇ ನಾಸಾ ಆರ್ಬಿಟರ್ ಲ್ಯಾಂಡರ್ ಸಮೀಪದಲ್ಲೇ ಹಾದುಹೋಗಲಿದ್ದು ಈ ವೇಳೆ ಲ್ಯಾಂಡರ್ ಪತ್ತೆ ಮಾಡುವ ಆಶಾವಾದವನ್ನು ನಾಸಾ ವ್ಯಕ್ತಪಡಿಸಿದೆ.

ಈಗಾಗಲೇ ಲ್ಯಾಂಡರ್ ಹಾಗೂ ರೋವರ್ ಕಾರ್ಯಾವಧಿ ಮುಕ್ತಾಯವಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಕಳೆದ ಶನಿವಾರವೇ ಕತ್ತಲು ಆವರಿಸಿದೆ. ರಾತ್ರಿಯ ವೇಳೆ ಚಂದ್ರನಲ್ಲಿ ಉಷ್ಣಾಂಶ -200 ಡಿಗ್ರೀ ದಾಟಲಿದ್ದು, ಈ ವೇಳೆ ಲ್ಯಾಂಡರ್ ಹಾಗೂ ರೋವರ್ ಸಂಪೂರ್ಣ ನಿಷ್ಕ್ರಿಯಗೊಳ್ಳಲಿದೆ ಎಂದು ಇಸ್ರೋ ಈ ಮೊದಲೇ ಹೇಳಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.