ಮೆಂಡನ್ : ಸೇನಾ ತರಬೇತಿಗಾಗಿ ಬಳಸಲಾಗುತ್ತಿದ್ದ ಹೆಲಿಕಾಪ್ಟರ್ ಪತನವಾಗಿ ಅಮೆರಿಕ ನ್ಯಾಷನಲ್ ಗಾರ್ಡ್ನ ಮೂವರು ಸದಸ್ಯರು ಸಾವನ್ನಪ್ಪಿರುವ ಘಟನೆ ಪಶ್ಚಿಮ ನ್ಯೂಯಾರ್ಕ್ ನಗರದಲ್ಲಿ ಇಂದು ನಡೆದಿದೆ.
ನ್ಯೂಯಾರ್ಕ್ನ ಮೆಂಡನ್ ಬಳಿಯಿರುವ ಕೃಷಿ ಭೂಮಿಯೊಂದರಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಆ ಹೆಲಿಕಾಪ್ಟರ್ ಅನ್ನು ಯುಹೆಚ್-60 ಬ್ಲ್ಯಾಕ್ ಹಾಕ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೀಜಿಂಗ್ ಗಣಿ ಸ್ಫೋಟ; ಓರ್ವ ಕಾರ್ಮಿಕ ಸಾವು, 10 ಜನ ನಾಪತ್ತೆ
ಹೆಲಿಕಾಪ್ಟರ್ ಪತನದ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಫೆಡರಲ್ ಎವಿಯೇಷನ್ ಅಡ್ಮಿನಿಸ್ಟ್ರೇಷನ್ ಸ್ಪಷ್ಟನೆ ನೀಡಿದೆ. ಇದರೊಂದಿಗೆ ಸ್ಥಳೀಯ ಮಾಧ್ಯಮಗಳಲ್ಲಿ ಹೆಲಿಕಾಪ್ಟರ್ನ ಬಿಡಿಭಾಗಗಳು ಬೆಂಕಿಗಾಹುತಿಯಾಗುತ್ತಿರುವ ದೃಶ್ಯಗಳು ಹರಿದಾಡಿವೆ.
ಹೆಲಿಕಾಪ್ಟರ್ ಪತನದ ವೇಳೆ ಮೃತಪಟ್ಟ ಸಿಬ್ಬಂದಿಗೆ ನ್ಯೂಯಾರ್ಕ್ನ ಮಿಲಿಟರಿ ಮತ್ತು ನೌಕಾ ವ್ಯವಹಾರಗಳ ಅಧಿಕಾರಿ ಎರಿಕ್ ಡರ್ ಸಂತಾಪ ಸೂಚಿಸಿದ್ದು, ಹೆಲಿಕಾಪ್ಟರ್ ಪತನದ ವೇಳೆ ಯಾರೂ ಬದುಕುಳಿದಿಲ್ಲ ಎಂಬ ತಿಳಿಸಿದ್ದಾರೆ.