ETV Bharat / international

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ 4, ಸರ್ಫೇಸ್ ಪ್ರೊ 8ನ ಮಾಹಿತಿ ಸೋರಿಕೆ

author img

By

Published : Nov 27, 2020, 9:41 PM IST

ಮುಂಬರುವ ಈ ಉತ್ಪನ್ನಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ. ಆದಾಗ್ಯೂ, ಅವುಗಳ ಲಭ್ಯತೆ ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ..

microsoft-surface-laptop-4-surface-pro-8-devices-leaked-online
ಲ್ಯಾಪ್‌ಟಾಪ್ 4, ಸರ್ಫೇಸ್ ಪ್ರೊ 8 ಬಗ್ಗೆ ಮಾಹಿತಿ ಸೋರಿಕೆ

ಸ್ಯಾನ್ ಫ್ರಾನ್ಸಿಸ್ಕೊ: ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ 4, ಸರ್ಫೇಸ್ ಪ್ರೊ 8 ಬಗ್ಗೆ ಆನ್​ಲೈನ್​ನಲ್ಲಿ ಮಾಹಿತಿ ಸೋರಿಕೆಯಾಗಿದ್ದು, ಈ ಸಾಧನಗಳು ಯಾವುದೇ ಹೊಸ ವಿನ್ಯಾಸಗಳನ್ನು ಒಳಗೊಂಡಿಲ್ಲ ಎಂದು ಚಿತ್ರಗಳು ದೃಢಪಡಿಸುತ್ತಿವೆ. ಬದಲಿಗೆ ಬಾಹ್ಯ ಸೌಂದರ್ಯವನ್ನು ಹಿಂದಿನ ಪೀಳಿಗೆಯಂತೆಯೇ ಇರಿಸಲಾಗಿದೆ.

ಈ ಲ್ಯಾಪ್​ಟಾಪ್​ಗಳು ಜನವರಿ ಮಧ್ಯದಲ್ಲಿ 11ನೇ ಜನರೇಷನ್​ನ ಇಂಟೆಲ್ ಪ್ರೊಸೆಸರ್‌ಗಳು ಮತ್ತು ಇಂಟೆಲ್‌ ಎಕ್ಸ್‌ಇ ಗ್ರಾಫಿಕ್ಸ್ ಬೆಂಬಲದೊಂದಿಗೆ ಬಿಡುಗಡೆಯಾಗುತ್ತವೆ ಎಂದು ಸಂಸ್ಥೆ ತಿಳಿಸಿತ್ತು.

ಸರ್ಫೇಸ್ ಲ್ಯಾಪ್‌ಟಾಪ್ 4 ಎಎಮ್‌ಡಿ ಪ್ರೊಸೆಸರ್ ಆಯ್ಕೆಗಳನ್ನು ಒಳಗೊಂಡಿರುತ್ತದೆ ಎಂಬ ವದಂತಿಗಳಿವೆ. ಇದು ಎಎಮ್‌ಡಿಯ ರೈಜೆನ್ 4000 ಸರಣಿ ಆಧರಿಸಿದ ಕಸ್ಟಮ್ ಮೈಕ್ರೋಸಾಫ್ಟ್ ಚಿಪ್ ಆಗಿರಬಹುದು ಎಂದು ಹೇಳಲಾಗಿದೆ.

ಮುಂಬರುವ ಈ ಉತ್ಪನ್ನಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ. ಆದಾಗ್ಯೂ, ಅವುಗಳ ಲಭ್ಯತೆ ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ.

ಮೈಕ್ರೋಸಾಫ್ಟ್ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಅದರ ಸರ್ಫೇಸ್ ಪ್ರೊ ಮತ್ತು ಸರ್ಫೇಸ್ ಲ್ಯಾಪ್‌ಟಾಪ್ ಶ್ರೇಣಿಯನ್ನು ರೀಫ್ರೆಶ್ ಮಾಡುತ್ತದೆ. ಈ ವರ್ಷ ನವೀಕರಿಸಿದ ಸರ್ಫೇಸ್ ಪ್ರೊ ಎಕ್ಸ್ ಜೊತೆಗೆ ಹೊಸ ಸರ್ಫೇಸ್ ಲ್ಯಾಪ್‌ಟಾಪ್ ಗೋ ಮಾದರಿ ಪರಿಚಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.