ಕ್ಯಾಲಿಫೊರ್ನಿಯ(ಯು.ಎಸ್.ಎ): ವಿಶ್ವದಾದ್ಯಂತ ಕೋಟ್ಯಂತರ ಜನ ತಮ್ಮ ಪಿಸಿ(ಕಂಪ್ಯೂಟರ್)ನಲ್ಲಿ ಬಳಸುತ್ತಿದ್ದ ವಿಂಡೋಸ್-7 ಇಂದಿಗೆ ಅಂತ್ಯವಾಗಲಿದೆ.
ವಿಶ್ವದ ಪ್ರಸಿದ್ಧ ಕಂಪನಿಗಳಲ್ಲೊಂದಾದ ಮೈಕ್ರೋಸಾಫ್ಟ್ ಕಂಪನಿಯು, 2009ರಲ್ಲಿ ವಿಂಡೋಸ್-7 ಸಾಫ್ಟ್ವೇರ್ಗೆ ಬೆಂಬಲ ನೀಡಿತ್ತು. ಇದೀಗ ಈ ಬೆಂಬಲವನ್ನು ಹಿಂಪಡೆದಿದ್ದು, ಮೈಕ್ರೋಸಾಫ್ಟ್ ಪಿಸಿಗಳಿಗೆ ವಿಂಡೋಸ್-7 ಸಾಫ್ಟ್ವೇರ್ ಸ್ಪಂದಿಸುವುದಿಲ್ಲ ಎಂದು ತಿಳಿಸಿದೆ.
ಮೈಕ್ರೋಸಾಫ್ಟ್ ಕಂಪನಿಯು ಈ ಹಿಂದೆಯೇ ಸಾಫ್ಟ್ವೇರ್ ತನ್ನ ಕೆಲಸ ನಿಲ್ಲಿಸಲಿದೆ ಎಂದು ಘೋಷಣೆ ಮಾಡಿತ್ತು. ಈ ಘೋಷಣೆಯಂತೆ ನಿನ್ನೆಯಿಂದಲೇ ಅಂದರೆ 14- 01-2020ಕ್ಕೆ ವಿಂಡೋಸ್ -7 ಸೇವೆಯನ್ನ ಮೈಕ್ರೋಸಾಫ್ಟ್ ಸ್ಥಗಿತಗೊಳಿಸಿದೆ.
ಇನ್ನು ಬಳಕೆದಾರರಿಗೆ ವಿಂಡೋಸ್-10 ಸಾಫ್ಟ್ವೇರ್ ಬಳಸುವಂತೆ ಮೈಕ್ರೋಸಾಫ್ಟ್ ಸೂಚನೆ ನೀಡಿದ್ದು, ನವೀಕರಿಸಿದ ವಿಂಡೋಸ್-10 ಸಾಫ್ಟ್ವೇರ್ನ ಉತ್ತೇಜನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಕ್ರೋಸಾಫ್ಟ್ ಕಂಪನಿಯು ತಿಳಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ವಿಂಡೋಸ್-7 ಸಾಫ್ಟ್ವೇರ್ ಬಳಕೆದಾರರ ಸ್ನೇಹಿಯಾಗಿದ್ದು, ಮೈಕ್ರೋಸಾಫ್ಟ್ ಕಂಪನಿಯು ನೀಡಿದ ಬೆಂಬಲವನ್ನು ಹಿಂಪಡೆದಿದ್ದರೂ ಸಹ ಈ ಸಾಫ್ಟವೇರ್ ಚಾಲ್ತಿಯಿಂದ ಹೊರ ಬರಲು ಒಂದರಿಂದ ಎರಡು ವರ್ಷಗಳ ಸಮಯ ತಗುಲಿದೆ ಎಂದು ನಿರೀಕ್ಷಿಸಲಾಗಿದೆ.