ವಾಷಿಂಗ್ಟನ್: ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ 20ಕ್ಕೂ ಅಧಿಕ ಜನರು ಮೃತಪಟ್ಟ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕ-ಮೆಕ್ಸಿಕೋ ಗಡಿಯಲ್ಲಿರುವ ಟೆಕ್ಸಾಸ್ನ ಮಾಲ್ವೊಂದರ ಬಳಿಯ ವಾಲ್ಮಾರ್ಟ್ ಸ್ಟೋರ್ ಹತ್ತಿರ ಘಟನೆ ನಡೆದಿದ್ದು, ಸುಮಾರು 21 ವರ್ಷದ ಯುವಕನೋರ್ವ ಈ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಯುವಕನನ್ನು ಬಂಧಿಸಲಾಗಿದ್ದು, ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಟೆಕ್ಸಾಸ್ ಗವರ್ನರ್ ಗ್ರೇಗ್ ಆಬೊಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ದುಷ್ಕರ್ಮಿ ಯುವಕ ಪಾಟ್ರಿಕ್ ಕ್ರುಸಿಯಸ್ ಎಂದು ವರದಿಯಾಗಿದ್ದು, ಈತ ಡಾಲ್ಲಾಸ್ನ ನಿವಾಸಿ ಎನ್ನಲಾಗಿದೆ. ಘಟನೆ ನಡೆದ ವಾಲ್ಮಾರ್ಟ್ ಸುತ್ತ ಭದ್ರತೆ ಒದಗಿಸಲಾಗಿದ್ದು, ಇನ್ನಷ್ಟು ಬಂದೂಕುಧಾರಿಗಳು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.