ETV Bharat / international

ಹೆಚ್​-1ಬಿ ವೀಸಾಗೆ ಸಿಗಲಿದೆಯಾ ಹೊಸ ಕಾನೂನು ಸ್ಪರ್ಶ..! ಇದು ಭಾರತೀಯರ ಮೇಲೆ ಬೀರಲಿದೆಯಾ ಪರಿಣಾಮ? - ಅಮೆರಿಕ ಕಾಂಗ್ರೆಸ್

ಹೆಚ್​-1ಬಿ ವೀಸಾ ಸಂಬಂಧ ಹೊಸ ಕಾನೂನನ್ನು ಅಮೆರಿಕ ಕಾಂಗ್ರೆಸ್​ನಲ್ಲಿ ಮಂಡಿಸಲಾಗಿದ್ದು, ಇದು ಜಾರಿಯಾದರೆ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

Legislation on H-1B visas introduced in US Congress
ಹೆಚ್​-1ಬಿ ವೀಸಾ
author img

By

Published : Mar 4, 2021, 8:19 AM IST

ವಾಷಿಂಗ್ಟನ್: ಹೆಚ್​-1ಬಿ ವೀಸಾ ಸಂಬಂಧ ಹೊಸ ಕಾನೂನನ್ನು ಅಮೆರಿಕ ಸಂಸತ್ತಿನಲ್ಲಿ (ಕಾಂಗ್ರೆಸ್​) ರಿಪಬ್ಲಿಕನ್ ಪಕ್ಷದ ಮೂವರು ಶಾಸಕರು ಮಂಡಿಸಿದ್ದಾರೆ.

ಅಮೆರಿಕ ಕಾಂಗ್ರೆಸ್​ನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಮಂಡನೆಯಾಗಿರುವ ಹೊಸ ಕಾನೂನಿನ ಪ್ರಕಾರ, ಹೆಚ್​-1ಬಿ ವೀಸಾ ಮೂಲಕ ಅಮೆರಿಕ ಕಂಪನಿಗಳಿಗೆ ಸೇರುತ್ತಿರುವ ವಿದೇಶಿ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳದಂತೆ ಉದ್ಯೋಗದಾತರು ತಡೆಯಬೇಕಾಗಿದೆ. ಅಲ್ಲದೇ ಅಮೆರಿಕ ಕಾರ್ಮಿಕರಿಗಿಂತ ವಿದೇಶಿಗರಿಗೆ ಹೆಚ್ಚಿನ ವೇತನ ನೀಡುವುದಕ್ಕೆ ನಿರ್ಬಂಧ ಹೇರುವ ಪ್ರಸ್ತಾಪ ಮಾಡಲಾಗಿದೆ.

ಇದನ್ನೂ ಓದಿ: ಜಮ್ಮು- ಕಾಶ್ಮೀರ ವಿಚಾರ: ಭಾರತ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದ ಅಮೆರಿಕ

ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಹೆಚ್​-1ಬಿ ವೀಸಾ ಯೋಜನೆಯನ್ನು ಕೂಲಂಕಷವಾಗಿ ಪರಿಶೀಲಿಸಲು ರಿಪಬ್ಲಿಕನ್ ಶಾಸಕರು ಬುಧವಾರ ಪ್ರಸ್ತಾಪಿಸಿದ್ದಾರೆ. ಇದು ಭಾರತೀಯ ಐಟಿ ಉದ್ಯೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ ಮೂವರು ಸಂಸದರು ಮಂಡಿಸಿರುವ ಈ ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.

ಕೋವಿಡ್​-19 ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಸೃಷ್ಟಿಯಾಗುವ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ ಹೆಚ್-1ಬಿ ಸೇರಿದಂತೆ ಹಲವಾರು ಉದ್ಯೋಗ ವೀಸಾಗಳ ಮೇಲೆ ಅಂದಿನ ಡೊನಾಲ್ಟ್​ ಟ್ರಂಪ್​ ಸರ್ಕಾರ ನಿರ್ಬಂಧ ಹೇರಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.