ಅಮೆರಿಕಾದ ಖ್ಯಾತ ಟಿವಿ ಮತ್ತು ರೇಡಿಯೋ ನಿರೂಪಕ ಲ್ಯಾರಿ ಕಿಂಗ್ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ಇವರು ತಮ್ಮ ಜೀವಿತಾವಧಿಯ ಅರ್ಧ ಶತಮಾನವನ್ನು ಟಿವಿ, ರೇಡಿಯೋಗಳಲ್ಲಿ ಖ್ಯಾತನಾಮರು ಮತ್ತು ಸಾಧಕರನ್ನು ಸಂದರ್ಶನ ಮಾಡುವುದರಲ್ಲಿಯೇ ಕಳೆದಿದ್ದಾರೆ.
ಮೂಲಗಳು ಪ್ರಕಾರ ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಅಲ್ಲದೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆಸ್ಪತ್ರೆ ಸೇರಿದ್ದು, ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಲ್ಯಾರಿ ಕಿಂಗ್ 1985 ರಿಂದ 2010ರವರೆಗೆ ಸರ್ಕಾರಿ ರೇಡಿಯೋದಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಎರಡು ಪೀಬಾಡಿ ಪ್ರಶಸ್ತಿ ಸೇರಿ ಹಲವು ಗೌರವಗಳು ಸಂದಿವೆ.
ರಾಜಕೀಯ ನಾಯಕರು, ದೇಶದ ಮುಖಂಡರು, ಸಿನಿ ತಾರೆಯರು ಕ್ರೀಡಾಪಟುಗಳ ಜೊತೆ ಲೀಲಾಜಾಲವಾಗಿ ಸಂದರ್ಶನ ಮಾಡುವ ಸಾಮರ್ಥ್ಯವನ್ನು ಲ್ಯಾರಿ ಕಿಂಗ್ ಹೊಂದಿದ್ದರು.