ವಾಷಿಂಗ್ಟನ್(ಯುಎಸ್): ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿದು ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ ಎಂದು ಅಮೆಜಾನ್ ಮಂಗಳವಾರ ತಿಳಿಸಿದೆ.
ಕಂಪನಿಯು ಸತತ ಮೂರನೇ ಬಾರಿ ದಾಖಲೆಯ ಲಾಭ ಮತ್ತು ತ್ರೈಮಾಸಿಕ ಮಾರಾಟವನ್ನು 100 ಬಿಲಿಯನ್ಗಿಂತ ಹೆಚ್ಚಿನ ಮೊತ್ತವನ್ನು ಮೊದಲ ಬಾರಿಗೆ ವರದಿ ಮಾಡಿದೆ. ಮೂರನೇ ತ್ರೈಮಾಸಿಕದ ಪರಿವರ್ತನೆಯಲ್ಲಿ ಕಂಪ್ಯೂಟಿಂಗ್ ಮುಖ್ಯಸ್ಥ ಆ್ಯಂಡಿ ಜಾಸ್ಸಿ ಅಮೆಜಾನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ.
ಗ್ರಾಹಕರು ರಜಾದಿನದ ಶಾಪಿಂಗ್‌ಗಾಗಿ ವಿಶ್ವದ ಅತಿದೊಡ್ಡ ಆನ್‌ಲೈನ್ ವ್ಯಾಪಾರದತ್ತ ತಿರುಗಿದ್ದರಿಂದ ಅಮೆಜಾನ್ ನೆಟ್ ಮಾರಾಟವು 125.56 ಶತಕೋಟಿ ಡಾಲರ್ಗೆ ಏರಿದೆ. ಇದು ನಿರೀಕ್ಷಿತ 119.7 ಬಿಲಿಯನ್ ಡಾಲರ್ ಅನ್ನು ಮೀರಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
27 ವರ್ಷಗಳ ಹಿಂದೆ ಇಂಟರ್ನೆಟ್ ಪುಸ್ತಕ ಮಾರಾಟಗಾರರಾಗಿ ಅಮೆಜಾನ್ ಕಂಪನಿಯನ್ನು ಪ್ರಾರಂಭಿಸಿದ ಬೆಜೋಸ್, ತಮ್ಮ ಉದ್ಯೋಗಿಗಳಿಗೆ ರಾಜೀನಾಮೆ ಕುರಿತು ಟಿಪ್ಪಣಿ ಬರೆದಿದ್ದಾರೆ. ಎಕ್ಸ್ ಚೇರ್ಮನ್ ಆಗಿ ನಾನು ಪ್ರಮುಖ ಅಮೆಜಾನ್ ಉಪಕ್ರಮಗಳಲ್ಲಿ ನಿರತರಾಗಿರುತ್ತೇನೆ. ಆದರೆ ಬ್ಯುಸಿನೆಸ್ ಬಗ್ಗೆ ಮೊದಲ ದಿನದಿಂದಲೂ ನಾನು ಗಮನ ಹರಿಸಬೇಕಾದ ಸಮಯ ಹಾಗೂ ಅದನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದ್ದೇನೆ ಎಂದು ಹೇಳಿದರು.
1997 ರಲ್ಲಿ ಅಮೆಜಾನ್‌ಗೆ ಸೇರಿಕೊಂಡ ಜಾಸ್ಸಿ ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್) ಅನ್ನು ಸ್ಥಾಪಿಸಿದರು. ಅದನ್ನು ಲಕ್ಷಾಂತರ ಜನರು ಬಳಸುವ ಕ್ಲೌಡ್ ಪ್ಲಾಟ್‌ಫಾರ್ಮ್‌ಗೆ ಬೆಳೆಸಿದರು ಎಂದು ಕಂಪನಿಯು ಹೇಳಿದೆ.